2023ರ ಮೊದಲ ಸೂರ್ಯಗ್ರಹಣ..

 ಮನುಷ್ಯನ ಆವಿರ್ಭಾವ ಆದಾಗಿನಿಂದ ನಭೋ ಮಂಡಲದ ಒಂದು ಕೌತುಕವಾಗಿ ನಮ್ಮನ್ನು ಚಕಿತಗೊಳಿಸುತ್ತಾ ಆಶ್ಚರ್ಯಗೊಳಿಸುತ್ತಾ ಮುಂದಿನ ಯಾವ ಶುಭಾಶುಭ ಫಲಗಳ ಸೂಚನೆಯಿದು ಎಂದು ನಮ್ಮೊಳಗೆ ನಾವೇ ಪ್ರಶ್ನಿಸುತ್ತಾ ಜ್ಯೋತಿಷ್ಯ ಶಾಸ್ತ್ರದತ್ತ ಮುಖ ಮಾಡುವ ಸಮಯ "ಗ್ರಹಣ"! ಬಹಳ ಅಪರೂಪ ಎಂಬಂತೆ ವರ್ಷದಲ್ಲಿ ಎಲ್ಲಿಯೋ ಒಂದೆರಡು ಬಾರಿ ಬರುವ ಈ ಗ್ರಹಣ ಈ ಬಾರಿ ೪ ಬಾರಿ ಸಂಭವಿಸುತ್ತಾ ಇದೆ. ಅವುಗಳಲ್ಲಿ ಮೊದಲ ಗ್ರಹಣ ಇದೇ ಬರುವ ಏಪ್ರಿಲ್ ೨೦ ಗುರುವಾರ ಅಮಾವಾಸ್ಯೆ ದಿನ ಸಂಭವಿಸಲಿರುವ "ಕಂಕಣ ಮಹಾ ಸೂರ್ಯ ಗ್ರಹಣ"! ಈ ಮೊದಲ ಸೂರ್ಯ ಗ್ರಹಣದ ಮೊದಲ ವಿಶೇಷತೆ ಅಂದರೆ ಅದು ನಮ್ಮ ಭಾರತ ದೇಶದಲ್ಲಿ ಕಾಣಿಸುತ್ತಾ ಇಲ್ಲಾ.

ಈ ಗ್ರಹಣವು ೨೦ ನೇ ತಾರೀಕು ಬೆಳಿಗ್ಗೆ ೦೭ ಗಂಟೆ ೦೪ ನಿಮಿಷದಿಂದ ಆರಂಭಗೊಂಡು ಅಪರಾಹ್ಣ ೧೨ ಗಂಟೆ ೨೪ ನಿಮಿಷ ತನಕ ಇರುತ್ತದೆ. ಈ ಗ್ರಹಣವು ಕಾಂಬೋಡಿಯಾ, ಮಲೇಶಿಯಾ,ಜಪಾನ್,ಬರೂನಿ,ಸಿಂಗಾಪುರ್,ಥಾಯಿಲ್ಯಾಂಡ್ ಅಂಟಾರ್ಟಿಕಾ ಆಸ್ಟ್ರೇಲಿಯ ನ್ಯೂಜೀಲ್ಯಾಂಡ್ ವಿಯಟ್ನಾಮ್ ಇತ್ಯಾದಿ ದೇಶಗಳಲ್ಲಿ ಕಾಣಬಹುದು.


ರಾಶಿಗಳ ಮೇಲಿನ ಪ್ರಭಾವ


ಪ್ರತೀ ಬಾರಿಯ ಗ್ರಹಣವೂ ಸಹ ೪ ರಾಶಿಗಳಿಗೆ ಶುಭ ೪ ರಾಶಿಗಳಿಪೆ ಅಶುಭ ಹಾಗೂ ನಾಲ್ಕು ರಾಶಿಗಳಿಗೆ ಮಿಶ್ರ ಫಲವನ್ನು ನೀಡುತ್ತದೆ. ಈ ಶುಭಾಶುಭ ಫಲಗಳನ್ನು ಲೆಕ್ಕ ಹಾಗುವಾಗ ಅದಕ್ಕೆ ಒಂದು ಪದ್ಧತಿ ಇದೆ ಅದೇನೆಂದರೆ ನಿಮ್ಮ ರಾಶಿಯಿಂದ ಎಷ್ಟನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಾ ಇದೆ ಎಂದು ನೋಡಾ ಬೇಕು ಅದರ ಆಧಾರದ ಮೇಲೆ ನಿಮ್ಮ ರಾಶಿಯಲ್ಲಿ ಅಥವಾ ನಿಮ್ಮ ರಾಶಿಯಿಂದ ೪,೮ ಅಥವಾ ೧೨ ನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಾ ಇದ್ದಲ್ಲಿ ಅದು ನಿಮಗೆ ಅಶುಭ ಫಲ. ಇನ್ನು ನಿಮ್ಮ ರಾಶಿಯಿಂದ ೩, ೬, ೧೦ ಅಥವಾ ೧೧ ನೇ ಮನೆಯಲ್ಲಿ ಗ್ರಹಣ ಸಂಭವಿಸಿದಲ್ಲಿ ಆ ಗ್ರಹಣ ನಿಮಗೆ ಶುಭ ಫಲ ನೀಡುತ್ತದೆ. ಇನ್ನು ನಿಮ್ಮ ರಾಶಿಯಿಂದ ೨, ೫, ೭ ಅಥವಾ ೯ ನೇ ರಾಶಿಯಲ್ಲಿ ಗ್ರಹಣ ಸಂಭವಿಸಿದಲ್ಲಿ ನಿಮಗೆ ಅದು ವಿಚಿತ್ರ ಮಿಶ್ರ ಫಲ ನೀಡುತ್ತದೆ ಇದು ಸಾರ್ವ ಕಾಲಿಕ ತಿಳಿದುಕೊಳ್ಳಿ.


ಯಾವ ರಾಶಿಗೆ ಶುಭ / ಅಶುಭ / ವಿಚಿತ್ರ ಮಿಶ್ರ ಫಲ


ಮೇಷ ರಾಶಿ , ವೃಷಭ ರಾಶಿ, ಕನ್ಯಾ ರಾಶಿ ಹಾಗೂ ಮಕರ ರಾಶಿಯವರಿಗೆ ಅಶುಭ ಫಲ


ಮಿಥುನ ರಾಶಿ, ಕರ್ಕಾಟಕ ರಾಶಿ, ವೃಶ್ಚಿಕ ರಾಶಿ ಹಾಗೂ ಕುಂಭ ರಾಶಿಯವರಿಗೆ ಶುಭ ಫಲ


ಸಿಂಹ ರಾಶಿ, ತುಲಾ ರಾಶಿ, ಧನು ರಾಶಿ ಹಾಗೂ ಮೀನ ರಾಶಿಯವರಿಗೆ ಮಿಶ್ರ ಫಲ



ಆಚರಣೆ / ಪರಿಹಾರ


ಮುಖ್ಯವಾಗಿ ಗಮನಿಸ ಬೇಕಾದ ವಿಚಾರ ಎಂದರೆ ಈ ಗ್ರಹಣ ಭಾರದಲ್ಲಿ ಕಾಣಿಸುತ್ತಾ ಇಲ್ಲಾ ಆದುದರಿಂದ ನಮ್ಮ ದೇಶದಲ್ಲಿ ಇದರ ಸೂತಕ ಆಚರಣೆ ಇರುವುದಿಲ್ಲಾ ಆದುದರಿಂದ ಗ್ರಹಣ ಆರಂಭಕ್ಕೂ ಮುನ್ನ ಉಪವಾಸ ಗ್ರಹಣ ಸಮಯದಲ್ಲಿ ಉಪವಾಸ ಗ್ರಹಣ ಸಮಯದಲ್ಲಿ ಸ್ನಾನ ಮನೆಯ ಶುಚಿ ಎಲ್ಲೆಡೆ ದರ್ಭೆ ಹಾಕಿಡುವುದು ಇತ್ಯಾದಿಗಳ ಅವಶ್ಯಕೆ ಇರುವುದಿಲ್ಲ. ಆದರೆ ಈ ಗ್ರಹಣದ ಆಚರಣೆ ಇಲ್ಲ ಎಂದರೆ ಪ್ರಭಾವ ಇಲ್ಲಾ ಎಂದು ಅಲ್ಲ ! ಆದುದರಿಂದ ಅಶುಭ ಫಲ ಇರುವವರು ಅವುಗಳಿಂದ ಹೊರ ಬರಲು ಶುಭ ಫಲ ಇರುವವರು ಆ ಶುಭವನ್ನು ನಿರ್ವಿಘ್ನವಾಗಿ ಪಡೆಯಲು ಹಾಗೂ ಮಿಶ್ರಫಲದವರು ಅಶುಭ ಫಲ ಬಿಟ್ಟು ಕೇವಲ ಶುಭ ಫಲವನ್ನು ಪಡೆಯಲು ಪರಿಹಾರಗಳನ್ನು ಅನುಸರಿಸುವುದು ಅತ್ಯಂತ ಆವಶ್ಯಕ.


ಸರಳ ಪರಿಹಾರಗಳು


ಗ್ರಹಣದ ದಿನ ಬೆಳಿಗ್ಗೆ ಗ್ರಹಣ ಆರಂಭದ ನಂತರ ಅಂದರೆ ಬೆಳಿಗ್ಗೆ ೭ಗಂಟೆ ೦೪ ನಿಮಿಷದ ನಂತರ ಸ್ನಾನ ಮಾಡಿ ಹತ್ತಿರದ ದೇಗುಲಕ್ಕೆ ಹೋಗಿ ಅಲ್ಲಿ ದೇವರಿಗೆ ಒಂದು ಅರ್ಚನೆ ಮಾಡಿಸಿ ಆ ಅರ್ಚನೆ ಮಾಡಿದ ಪುರೊಹಿತರಿಗೆ ಒಂದು ಕೆಜಿ ಉದ್ದಿನ ಬೇಳೆ ಹಾಗೂ ಒಂದು ಕೆಜಿ ಗೋಧಿ ದಾನ ಮಾಡಿ. ಮನೆಯಲ್ಲಿ ಮಧ್ಯಾನ ೧೨ ಗಂಟೆ ೨೪ ನಿಮಿಷ ತನಕ ಅಂದರೆ ಈ ಗ್ರಹಣ ಮುಗಿಯುವ ತನಕ ಸೂರ್ಯಾಷ್ಟಕ , ರವಿ ಅಷ್ಟೋತ್ತರ , ಆದಿತ್ಯ ಹೃದಯ ಸ್ತೋತ್ರ, ರಾಹು ಅಷ್ಟೋತ್ತರ ಇತ್ಯಾದಿ ಎಲ್ಲವನ್ನು ನಿಮಗೆ ಅನುಕೂಲ ಆಗುವ ಉತ್ತಮ ಸ್ಥಳದಲ್ಲಿ ಕುಳಿತು ಪಠಿಸ ಬಹುದು {ಅವಕಾಶ ಸಿಕ್ಕಲ್ಲಿ ನೀವು ಉದ್ಯೋಗ ಮಾಡುವ ಸ್ಥಳದಲ್ಲಿ ಸಹ}. ಇನ್ನು ಗ್ರಹಣ ಸಮಯದಲ್ಲಿ ಜಪ ಮಾಡುವುದಕ್ಕೂ ಸಹ ವಿಶೇಷ ಫಲ ಇದೆ ಆದುದರಿಂದ ನೀವು ಈ ಸಮಯದಲ್ಲಿ ಅಷ್ಟಾಕ್ಷರೀ ಮಂತ್ರ {ಓಂ ನಮೋ ನಾರಾಯಣಾಯ} ಅಥವಾ ಪಂಚಾಕ್ಷರೀ ಮಂತ್ರ {ಓಂ ನಮಃ ಶಿವಾಯ} ಯಥಾ ಶಕ್ತಿ ಜಪ ಮಾಡಿದರೆ ಉತ್ತಮ.


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

maruvivaaha....

ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಕುಂಭ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು..