ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಕುಂಭ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು..
ಶುಭ ವಿಚಾರ
ನಿಮ್ಮ ರಾಶಿಯಿಂದ ಹನ್ನೊಂದನೇ ಮನೆಯಲ್ಲಿ ಬುಧ ಸಂಚಾರ ಮಾಡುವಾಗ, ಅಂದರೆ ಫೆಬ್ರವರಿ ಮೊದಲ ವಾರದಲ್ಲಿ ಮನೆಯಲ್ಲಿ ಸಂತಸದ ವಾತಾವರಣ ಇರುತ್ತದೆ. ವೃದ್ಧಿ ಕಾರ್ಯಗಳು ನಡೆಯುತ್ತವೆ.
ಎರಡನೇ ಮನೆಯಲ್ಲಿ ಪರಮೋಚ್ಚ ಸ್ಥಿತಿಯಲ್ಲಿ ಶುಕ್ರ ಸಂಚಾರ ಮಾಡುವಾಗ ಹಣಕಾಸು ಮೂಲಗಳು ಜಾಸ್ತಿ ಆಗುತ್ತವೆ. ಆದರೆ ಇವುಗಳನ್ನು ಉಳಿಸಿಕೊಂಡು ಹೋಗುವುದು ಮುಖ್ಯವಾಗುತ್ತದೆ.
ನಿಮ್ಮ ಧನಾಧಿಪತಿ ಅದೇ ಮನೆಯಲ್ಲಿ, ಅಂದರೆ ಮೀನದಲ್ಲಿ ಗುರು ಸಂಚಾರ ಮಾಡುತ್ತಿರುವುದರಿಂದ ನಿಮ್ಮ ಮಾತಿಗೆ, ಶಿಫಾರಸಿಗೆ ಬೆಲೆ ಬರುತ್ತದೆ. ಕುಟುಂಬ ಸದಸ್ಯರ ಸಹಕಾರದಿಂದ ಆದಾಯ ಜಾಸ್ತಿ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಫ್ಯಾಮಿಲಿ ಬಿಜಿನೆಸ್ ಮಾಡುತ್ತಿರುವವರಿಗೆ ಉತ್ತಮ ಬೆಳವಣಿಗೆ ಇದು.
ಶುಕ್ರ ನಿಮ್ಮದೇ ರಾಶಿಯಲ್ಲಿ ಸಂಚರಿಸುವಾಗ ಸ್ವಲ್ಪ ಮಟ್ಟಿಗೆ ಆರೋಗ್ಯದಲ್ಲಿ ಮೇಲೆ ಎನಿಸಿಕೊಳ್ಳುತ್ತದೆ. ಮುಖ್ಯವಾಗಿ ಸರಿಯಾದ ವೈದ್ಯರ ಪರಿಚಯ, ಸೂಕ್ತ ಔಷಧೋಪಚಾರ ದೊರೆಯಲಿದೆ.
ಇನ್ನು ಮೂರನೇ ಮನೆಯಲ್ಲಿ ರಾಹು ಸಂಚಾರ ಮಾಡುವುದರಿಂದ ಸ್ಟಾಕಿಸ್ಟ್ ಗಳಿಗೆ, ಅಂದರೆ ಬೆಲೆ ಜಾಸ್ತಿ ಆಗಬಹುದು ಎಂದು ಮುಂಚೆಯೇ ಅಂದಾಜು ಮಾಡಿ, ವಸ್ತುಗಳನ್ನು ದಾಸ್ತಾನು ಮಾಡಿಟ್ಟುಕೊಂಡವರಿಗೆ ಲಾಭ ಹೆಚ್ಚಾಗಲಿದೆ.
#ಕುಂಭ_ರಾಶಿ #kumbha_rashi #february #2023 #ಶುಭ_ವಿಚಾರಗಳು #vittalbhat astrology in kannada ಮಾಸ ಭವಿಷ್ಯ ಆಚಾರ್ಯ ಶ್ರೀ ವಿಠ್ಠಲ್ ಭಟ್ 9113295125, 6361335497
https://youtu.be/KMKTKrWFMWs
ಅಶುಭ ವಿಚಾರ
ನಿಮ್ಮ ಜನ್ಮ ರಾಶಿಯಲ್ಲೇ ಶನಿ ಸಂಚಾರ ಮಾಡುವುದರಿಂದ ಆರೋಗ್ಯದಲ್ಲಿ ಬಹಳ ಎಚ್ಚರಿಕೆಯಿಂದ ಇರಬೇಕು. ಬೇರೆ ಬೇರೆ ಅನಾರೋಗ್ಯ ಸಮಸ್ಯೆಗಳು ಇದ್ದರೂ ಅದು ಕಾಲಿನ ಮೇಲೆ ಪರಿಣಾಮ ಬೀರಲಿದೆ. ಮೀನಖಂಡ, ಜೀರ್ಣಾಂಗ ವ್ಯವಸ್ಥೆ ಮೇಲೆ ಅಡ್ಡ ಪರಿಣಾಮ ಬೀರಲಿದೆ.
ಹನ್ನೆರಡನೇ ಮನೆಯಲ್ಲಿ ರವಿ ಸಂಚಾರ ಮಾಡುವಾಗ ತಂದೆಯವರ ಅನಾರೋಗ್ಯ ಚಿಂತೆಗೆ ಕಾರಣ ಆಗಲಿದೆ. ಅದಕ್ಕಾಗಿ ಬಹಳ ಹಣವನ್ನೂ ಖರ್ಚು ಮಾಡಬೇಕಾಗುತ್ತದೆ.
ಹನ್ನೆರಡನೇ ಮನೆಯಲ್ಲಿ ಬುಧ ಸಂಚರಿಸುವಾಗ ನಿಮಗೆ ಅಗತ್ಯ ಇಲ್ಲದಿದ್ದರೂ ಕೆಲವು ಗ್ಯಾಜೆಟ್ ಖರೀದಿಸುವಂತಾಗುತ್ತದೆ. ಅಥವಾ ಯಾವುದಾದರೂ ವಸ್ತು ಈಗಾಗಲೇ ಖರೀದಿಸಿದ್ದೀರಿ ಅದರ ವಾರಂಟಿ ಅವಧಿ ಮುಗಿದು ಕೆಲವೇ ದಿನಕ್ಕೆ ಆ ವಸ್ತು ರಿಪೇರಿಗೆ ಬಂದು, ಅದಕ್ಕಾಗಿ ಖರ್ಚು ಮಾಡಬೇಕಾಗುತ್ತದೆ.
ನಾಲ್ಕನೇ ಮನೆಯಲ್ಲಿ ಕುಜ ಸಂಚಾರ ಆಗುವುದರಿಂದ ನಿಮ್ಮ ತಾಯಿಯವರ ರಕ್ತದೊತ್ತಡವನ್ನು ಸರಿಯಾಗಿ ನಿಗಾ ಮಾಡಿ. ಇನ್ನು ಸಿಟ್ಟಿನ ಭರದಲ್ಲಿ ಕೆಲವು ಮಾತುಗಳನ್ನಾಡಿ ಅಥವಾ ಭರವಸೆ ನೀಡಿ, ಹಣವನ್ನು ಕಳೆದುಕೊಳ್ಳಲಿದ್ದೀರಿ.
ನಿಮಗೆ ಒಂಬತ್ತನೇ ಮನೆಯಲ್ಲಿ ಕೇತು ಸಂಚರಿಸುವಾಗ ಅದೃಷ್ಟ ಪರೀಕ್ಷೆಗೆ ಇಳಿದವರಿಗೆ ಪದೇ- ಪದೇ ನಷ್ಟ ಹಾಗೂ ತಂದೆ ಹಾಗೂ ನಿಮ್ಮ ಸಂಬಂಧದ ಮಧ್ಯೆ ಮೂರನೇ ವ್ಯಕ್ತಿಗಳು ಹುಳಿ ಹಿಂಡುವ ಕೆಲಸ ಮಾಡಲಿದ್ದಾರೆ.
#ಕುಂಭ_ರಾಶಿ #kumbha_rashi #February #2023 #ಮಾಸ_ಭವಿಷ್ಯ #vittalbhat #ಎಚ್ಚರಿಕೆಗಳು
https://youtu.be/eCPBsREtqj0
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ