2023ರ ಮೊದಲ ಸೂರ್ಯಗ್ರಹಣ..
ಮನುಷ್ಯನ ಆವಿರ್ಭಾವ ಆದಾಗಿನಿಂದ ನಭೋ ಮಂಡಲದ ಒಂದು ಕೌತುಕವಾಗಿ ನಮ್ಮನ್ನು ಚಕಿತಗೊಳಿಸುತ್ತಾ ಆಶ್ಚರ್ಯಗೊಳಿಸುತ್ತಾ ಮುಂದಿನ ಯಾವ ಶುಭಾಶುಭ ಫಲಗಳ ಸೂಚನೆಯಿದು ಎಂದು ನಮ್ಮೊಳಗೆ ನಾವೇ ಪ್ರಶ್ನಿಸುತ್ತಾ ಜ್ಯೋತಿಷ್ಯ ಶಾಸ್ತ್ರದತ್ತ ಮುಖ ಮಾಡುವ ಸಮಯ "ಗ್ರಹಣ"! ಬಹಳ ಅಪರೂಪ ಎಂಬಂತೆ ವರ್ಷದಲ್ಲಿ ಎಲ್ಲಿಯೋ ಒಂದೆರಡು ಬಾರಿ ಬರುವ ಈ ಗ್ರಹಣ ಈ ಬಾರಿ ೪ ಬಾರಿ ಸಂಭವಿಸುತ್ತಾ ಇದೆ. ಅವುಗಳಲ್ಲಿ ಮೊದಲ ಗ್ರಹಣ ಇದೇ ಬರುವ ಏಪ್ರಿಲ್ ೨೦ ಗುರುವಾರ ಅಮಾವಾಸ್ಯೆ ದಿನ ಸಂಭವಿಸಲಿರುವ "ಕಂಕಣ ಮಹಾ ಸೂರ್ಯ ಗ್ರಹಣ"! ಈ ಮೊದಲ ಸೂರ್ಯ ಗ್ರಹಣದ ಮೊದಲ ವಿಶೇಷತೆ ಅಂದರೆ ಅದು ನಮ್ಮ ಭಾರತ ದೇಶದಲ್ಲಿ ಕಾಣಿಸುತ್ತಾ ಇಲ್ಲಾ. ಈ ಗ್ರಹಣವು ೨೦ ನೇ ತಾರೀಕು ಬೆಳಿಗ್ಗೆ ೦೭ ಗಂಟೆ ೦೪ ನಿಮಿಷದಿಂದ ಆರಂಭಗೊಂಡು ಅಪರಾಹ್ಣ ೧೨ ಗಂಟೆ ೨೪ ನಿಮಿಷ ತನಕ ಇರುತ್ತದೆ. ಈ ಗ್ರಹಣವು ಕಾಂಬೋಡಿಯಾ, ಮಲೇಶಿಯಾ,ಜಪಾನ್,ಬರೂನಿ,ಸಿಂಗಾಪುರ್, ಥಾಯಿಲ್ಯಾಂಡ್ ಅಂಟಾರ್ಟಿಕಾ ಆಸ್ಟ್ರೇಲಿಯ ನ್ಯೂಜೀಲ್ಯಾಂಡ್ ವಿಯಟ್ನಾಮ್ ಇತ್ಯಾದಿ ದೇಶಗಳಲ್ಲಿ ಕಾಣಬಹುದು. ರಾಶಿಗಳ ಮೇಲಿನ ಪ್ರಭಾವ ಪ್ರತೀ ಬಾರಿಯ ಗ್ರಹಣವೂ ಸಹ ೪ ರಾಶಿಗಳಿಗೆ ಶುಭ ೪ ರಾಶಿಗಳಿಪೆ ಅಶುಭ ಹಾಗೂ ನಾಲ್ಕು ರಾಶಿಗಳಿಗೆ ಮಿಶ್ರ ಫಲವನ್ನು ನೀಡುತ್ತದೆ. ಈ ಶುಭಾಶುಭ ಫಲಗಳನ್ನು ಲೆಕ್ಕ ಹಾಗುವಾಗ ಅದಕ್ಕೆ ಒಂದು ಪದ್ಧತಿ ಇದೆ ಅದೇನೆಂದರೆ ನಿಮ್ಮ ರಾಶಿಯಿಂದ ಎಷ್ಟನೇ ರಾಶಿಯಲ್ಲಿ ಗ್ರಹಣ ಸಂಭವಿಸುತ್ತಾ ಇದೆ ಎಂದು ನೋಡಾ...