ಯುಗಾದಿ ವರ್ಷ ಭವಿಷ್ಯ: ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಶೋಭಕೃತ್ ಸಂವತ್ಸರದ ವರ್ಷ ಫಲ..!


ಯುಗಾದಿಯಲ್ಲಿ ಎರಡು ಪದ್ಧತಿಯನ್ನು ಅನುಸರಿಸಲಾಗುತ್ತದೆಒಂದು ಚಾಂದ್ರಮಾನಇನ್ನೊಂದು ಸೌರಮಾನಚಾಂದ್ರಮಾನ ಯುಗಾದಿ ಮಾರ್ಚ್ 22, 2023ರಂದು ಇದೆಇದರೊಂದಿಗೆ ಶೋಭಕೃತು ನಾಮ ಸಂವತ್ಸರ ಆರಂಭವಾಗಲಿದೆಇದು ಏಪ್ರಿಲ್ 8, 2024 ತನಕ ಇರುತ್ತದೆ ಸಂವತ್ಸರದಲ್ಲಿ ಮೇಷದಿಂದ ಮೀನದ ತನಕ ದ್ವಾದಶ ರಾಶಿಗಳ ಗೋಚಾರ ಫಲ ಹೇಗಿರುತ್ತದೆ ಎಂಬ ವಿವರ ಇಲ್ಲಿದೆಅದಕ್ಕೂ ಮುನ್ನ  ಸಂವತ್ಸರದಲ್ಲಿ ಪ್ರಮುಖ ಗ್ರಹಗಳಾದ ಶನಿಗುರುರಾಹುಕೇತು ಸಂಚಾರದ ಬಗ್ಗೆ ವಿವರಗಳು ಇಲ್ಲಿವೆ


ಶನಿ ಗ್ರಹವು ಯುಗಾದಿ ಆರಂಭದಿಂದ ಸಂವತ್ಸರದ ಅಂತ್ಯದ ತನಕ  ಕುಂಭ ರಾಶಿಯಲ್ಲಿ ಸಂಚರಿಸಲಿದೆಇನ್ನು ಗುರು ಗ್ರಹವು ಯುಗಾದಿ ಆರಂಭದಿಂದ ಏಪ್ರಿಲ್ 22, 2023 ತನಕ ಮೀನಏಪ್ರಿಲ್ 22, 2023ರಿಂದ ಸಂವತ್ಸರದ ಅಂತ್ಯದ ತನಕ ಮೇಷ ರಾಶಿಯಲ್ಲಿ ಸಂಚಾರ ಇರುತ್ತದೆಛಾಯಾ ಗ್ರಹಗಳಾದ ರಾಹುಕೇತುಗಳು ಯುಗಾದಿ ಆರಂಭದಿಂದ ಅಕ್ಟೋಬರ್ 30, 2023 ತನಕ ಮೇಷದಲ್ಲಿ ರಾಹುತುಲಾದಲ್ಲಿ ಕೇತುಇನ್ನು  ಅಕ್ಟೋಬರ್ 30, 2023ರಿಂದ ಸಂವತ್ಸರದ ಕೊನೆ ತನಕ ಮೀನದಲ್ಲಿ ರಾಹುಕನ್ಯಾದಲ್ಲಿ ಕೇತು ಸಂಚಾರ ಇರುತ್ತದೆ.


ಇಲ್ಲಿರುವುದು ಗೋಚಾರ ಫಲ ಮಾತ್ರಅಂದರೆ ಹನ್ನೆರಡು ರಾಶಿಗಳಿಗೆ


 ಗ್ರಹ ಸಂಚಾರದ ಆಧಾರದಲ್ಲಿ ಪ್ರಭಾವ ಹೇಗಿರುತ್ತದೆ ಎಂಬುದರ ಭವಿಷಯನಿಮ್ಮ ಜನ್ಮ ಜಾತಕದಲ್ಲಿನ ಗ್ರಹ ಸ್ಥಿತಿದಶಾ ಸಂಧಿ ಕಾಲದಶಾಭುಕ್ತಿಗಳ ಬದಲಾವಣೆ  ಎಲ್ಲವೂ ಮುಖ್ಯ ಆಗುತ್ತದೆಆದರೆ ಪ್ರಭಾವ ಖಂಡಿತಾ ಇರುತ್ತದೆ


ಮೇಷ

ನಿಮ್ಮ ರಾಶಿಗೆ ಹನ್ನೊಂದನೇ ಮನೆಯಲ್ಲಿ ಶನಿ ಸಂಚಾರದ ವೇಳೆ ನಾನಾ ಬಗೆಯಲ್ಲಿ ಲಾಭ ಕಾಣುತ್ತೀರಿಆಸ್ತಿ ಲಾಭವಾಹನ ಲಾಭಪ್ರಭಾವಿ ವ್ಯಕ್ತಿಗಳ ಜತೆಗೆ ಸಂಪರ್ಕವರ್ತಕರುಉದ್ಯಮಿಗಳಿಗೆ ವ್ಯವಹಾರದಲ್ಲಿ ಅನುಕೂಲ ಇತ್ಯಾದಿ ಉತ್ತಮ ಫಲಗಳಿವೆಇನ್ನು ಜನ್ಮ ರಾಶಿಯಲ್ಲಿ ಗುರು ಸಂಚಾರ ಇರುವಾಗ ಆರೋಗ್ಯ ಕಡೆಗೆ ಲಕ್ಷ್ಯ ನೀಡಿಮಧುಮೇಹರಕ್ತದೊತ್ತಡಥೈರಾಯ್ಡ್ಕಾಲುಬೆನ್ನು ನೋವು ಹೀಗೆ ವಿವಿಧ ಅನಾರೋಗ್ಯ ಸಮಸ್ಯೆಗಳನ್ನು ಈಗಾಗಲೇ ಎದುರಿಸುತ್ತಿದ್ದಲ್ಲಿ ಉಲ್ಬಣ ಆಗಲಿವೆಇವುಗಳಿಗೆ ಮೊದಲ ಮುಂಜಾಗ್ರತೆ ಏನೆಂದರೆಆಹಾರದಲ್ಲಿ ನಿಯಂತ್ರಣ ಸಾಧಿಸುವುದುಅದರ ಜತೆಗೆ ನಿಮ್ಮ ದೇಹಕ್ಕೆ ಅಗತ್ಯವಾದಷ್ಟು ಮಾತ್ರ ನೀರು ಸೇವನೆ ಮಾಡುವುದು ಅವಧಿಯಲ್ಲಿ ನಿಮ್ಮ ಆತ್ಮವಿಶ್ವಾಸ ಜಾಸ್ತಿ ಆಗುತ್ತದೆ ಕಾರಣಕ್ಕೆನಿಮಗಿಂತ ಬಲಿಷ್ಠರ ಜತೆಗೆ ಶತ್ರುತ್ವ ಬೇಡಅಕ್ಟೋಬರ್ ತನಕ ನಿಮ್ಮ ಜನ್ಮ ರಾಶಿಯಲ್ಲೇ ರಾಹು ಹಾಗೂ ಏಳನೇ ಮನೆಯಲ್ಲಿ ಕೇತು ಸಂಚರಿಸುವಾಗ ಸಜ್ಜನರು ದೂರವಾಗುತ್ತಾರೆದುಷ್ಟ ಜನರ ಸಹವಾಸ ಆಗುತ್ತದೆನಾನೇ ಎಲ್ಲ ಎಂಬ ಅಹಂಭಾವ ತಲೆಗೆ ಏರುತ್ತದೆಕುಟುಂಬದಲ್ಲಿ - ಪಾಲುದಾರಿಕೆ ವ್ಯವಹಾರದಲ್ಲಿ ‌ಜಗಳ ಆಗಲಿದೆಮಾತಿನಲ್ಲಿ ಎಚ್ಚರ ಇರಲಿಸಂವತ್ಸರದ ಕೊನೆಗೆ ನಿಮ್ಮ ಪಾಲಿನ ಆದಾಯವ್ಯಯ ಅಲ್ಲಿಂದ ಅಲ್ಲಿಗೆ ಎಂಬಂತೆ ಇರುತ್ತದೆ


ವೃಷಭ

ಶನಿಯು ಕುಂಭ ರಾಶಿಯಲ್ಲಿ ಸಂಚರಿಸುವಾಗ ವೃತ್ತಿಯನ್ನು ಮಾಡುವವರುಉದ್ಯೋಗಿಗಳಿಗೆ ಉತ್ತಮ ಅವಧಿ ಅಲ್ಲನೀವು ಮಾಡಿದ್ದ ಕೆಲಸಕ್ಕೆ ಬರಬೇಕಾದ ಮೆಚ್ಚುಗೆಬಡ್ತಿಸಂಬಳದ ಹೆಚ್ಚಳವು ಇತರರ ಪಾಲಾಗುತ್ತದೆನಿಮಗೆ ಒಳ್ಳೆ ಉದ್ದೇಶ ಇರುತ್ತದೆಹಾಗೆ ಹೇಳಿದ ವಿಚಾರವನ್ನು ಬೇರೆ ರೀತಿ ಗ್ರಹಿಸಿಅಥವಾ ಒಂದಕ್ಕೆ ನಾಲ್ಕು ಏನೇನೋ ಸೇರಿಸಿಕೊಂಡು ಹೇಳಿ ನಿಮ್ಮ ಇಮೇಜ್ ಡ್ಯಾಮೇಜ್ ಮಾಡುವ  ಕೆಲಸ ಆಗುತ್ತದೆನಿಮಗೆ ಅಂತ ವಹಿಸಿದ ಕೆಲಸವನ್ನು ಇನ್ನೊಬ್ಬರಿಗೆ ವಹಿಸಬೇಡಿಆಲಸ್ಯವೋ ತಿರಸ್ಕಾರವೋ ನಿಮಗೆ ಉರುಳಾಗಬಹುದುಏಪ್ರಿಲ್‌ ತಿಂಗಳ ಇಪ್ಪತ್ತೆರಡನೇ ತಾರೀಕಿನ ತನಕ ಹನ್ನೊಂದರಲ್ಲಿ ಗುರು ಸಂಚಾರ ವೇಳೆ ನಾನಾ ಲಾಭ ಆಗುತ್ತದೆತೀರ್ಥಕ್ಷೇತ್ರ ದರ್ಶನಗುರುಗಳ ಆರಾಧನೆಗೆ ಅವಕಾಶಮನೆಯಲ್ಲಿ ನೆಮ್ಮದಿಸಜ್ಜನರ ಒಡನಾಟವ್ಯಾಪಾರವ್ಯವಹಾರದಲ್ಲಿ ಲಾಭ ಹೀಗೆ ಶುಭ ಫಲಗಳಿವೆಇದೇನಿದ್ದರೂ ಯುಗಾದಿಯಿಂದ ಒಂದು ತಿಂಗಳು ಮಾತ್ರಹನ್ನೆರಡನೇ ಮನೆಯಲ್ಲಿ ಗುರು ಸಂಚಾರದ ವೇಳೆ ಖರ್ಚಿನ ಪ್ರಮಾಣ ಹೆಚ್ಚುಹನ್ನೆರಡರಲ್ಲಿ ಸಂಚರಿಸುವ ರಾಹುಆರನೇ ಮನೆಯಲ್ಲಿ ಕೇತು ಆದಾಯವ್ಯಯದ ಬಗ್ಗೆ ಅಂದಾಜು ಸಿಗದಂಥ ಸ್ಥಿತಿಗೆ ದೂಡುತ್ತವೆಹಣಕಾಸಿನ ವಿಚಾರದಲ್ಲಿ ಹಿಂಜರಿಕೆ ಕಾಡುತ್ತದೆ ಸಂವತ್ಸರದ ಕೊನೆಗೆ ಭೂಮಿ ಲಾಭ ಇದೆಹಿತಶತ್ರುಗಳಿಂದ ಎಚ್ಚರಕೆ ವಹಿಸುವುದು ತುಂಬ ಅಗತ್ಯ.  



ಮಿಥುನ

 ತನಕ ಕಾಡಿದ್ದ ಎಂಟನೇ ಮನೆಯ ಶನಿಯಿಂದ ದೊಡ್ಡ ಮಟ್ಟದಲ್ಲಿ ಚೇತರಿಕೆ ಸಿಗುತ್ತದೆಆರೋಗ್ಯ ಸಮಸ್ಯೆಗಳು ನಿವಾರಣೆಯಾಗಿ ಅಥವಾ ಹತೋಟಿಗೆ ಬಂದುಚೇತರಿಕೆ ಕಂಡುಬರುತ್ತದೆಅವಮಾನ ಎದುರಿಸುವ ಸನ್ನಿವೇಶಗಳು ಕಡಿಮೆ ಆಗುತ್ತವೆನಿಮ್ಮ ತಂದೆ ಅಥವಾ ತಂದೆಗೆ ಸಮಾನರಾದವರುದೊಡ್ಡಪ್ಪಚಿಕ್ಕಪ್ಪಮಾವ ಇಂಥವರ ಆರೋಗ್ಯದ ಬಗ್ಗೆ ಎಚ್ಚರಿಕೆ ಅಗತ್ಯಸಣ್ಣಪುಟ್ಟ ಆರೋಗ್ಯ ಸಮಸ್ಯೆ ಎಂದು ನಿರ್ಲಕ್ಷ್ಯ ಮಾಡಿದಲ್ಲಿ ಅದು ದೊಡ್ಡದಾಗಿ ಕಾಡಬಹುದುಇನ್ನು ಗುರು  ಹನ್ನೊಂದನೇ ಮನೆಯಲ್ಲಿ ಸಂಚರಿಸುವುದರಿಂದ  ಹಿಂದಿನ ಹೂಡಿಕೆಗಳು ಅತ್ಯುತ್ತಮ ಲಾಭ ನೀಡುತ್ತವೆನಿರೀಕ್ಷೆ ಮಾಡಿರದ ರೀತಿಯಲ್ಲಿ ಬಡ್ತಿವೇತನ ಹೆಚ್ಚಳ ಕಾಣುತ್ತದೆಮೇಲಧಿಕಾರಿಗಳು ನಿಮ್ಮ ಸಾಮರ್ಥ್ಯವನ್ನು ಗುರುತಿಸಿಹೆಚ್ಚಿನ ಜವಾಬ್ದಾರಿ ಹಾಗೂ ಸ್ಥಾನ ನೀಡಲಿದ್ದಾರೆಇನ್ನು ರಾಹು ಹನ್ನೊಂದನೇ ಮನೆ ಹಾಗೂ ಕೇತು ಐದನೇ ಮನೆಯಲ್ಲಿ ಸಂಚರಿಸುವಾಗ ಜಾಗ ಖರೀದಿಸಟ್ಟಾ ವ್ಯವಹಾರದಲ್ಲಿ ಲಾಭವಿದೇಶ ವ್ಯವಹಾರಗಳಿಂದ ಲಾಭ ಮೊದಲಾದವು ಇವೆಆದರೆ ಮಕ್ಕಳ ಆರೋಗ್ಯಯಾರ ಜತೆಗೆ ಸ್ನೇಹದಿಂದ ಇದ್ದಾರೆ ಗಮನಿಸಿಇನ್ನು ಅಕ್ಟೋಬರ್ ತಿಂಗಳ ನಂತರದಲ್ಲಿ ರಾಹು ಹತ್ತನೇ ಮನೆಗೆಕೇತು ನಾಲ್ಕನೇ ಮನೆಗೆ ಪ್ರವೇಶ ಆಗುತ್ತದೆದಿಢೀರ್ ಎಂದು ಬರುವ ಹಣಕ್ಕೆ ಆಸೆ ಪಟ್ಟರೆ ಸಮಸ್ಯೆ ಮೈಮೇಲೆ ಎಳೆದುಕೊಂಡಂತೆ ಆಗುತ್ತದೆಉದ್ಯೋಗಿಗಳು ಎಚ್ಚರಿಕೆ ವಹಿಸಿ


ಕರ್ಕಾಟಕ

 ಸಂವತ್ಸರ ನಿಮಗೆ ಶನಿಯು ಎಂಟನೇ ಮನೆಯಲ್ಲಿ ಸಂಚರಿಸುತ್ತದೆಆದ್ದರಿಂದ ಶನೈಶ್ಚರ ಶಾಂತಿ ಮಾಡಿಸಿಕೊಳ್ಳುವುದು ಅಗತ್ಯಇದರ ಜತೆಗೆ ಆಂಜನೇಯಶಿವನ ಆರಾಧನೆ ಮಾಡಿ ಅವಧಿಯಲ್ಲಿ ವಿವಿಧೆಡೆ ಅವಮಾನಗಳಾಗುತ್ತವೆಅಪಘಾತ ಆಗಬಹುದುಕಾಯಿಲೆ ಏನು ಅಂತ ಗೊತ್ತಾಗದಂಥ ಸ್ಥಿತಿ ಸೃಷ್ಟಿ ಆಗಲಿದೆಒಂದು ವೇಳೆ ನಿಮ್ಮ ಜನ್ಮ ಜಾತಕದಲ್ಲಿ ಶನಿ ಗ್ರಹ ದುರ್ಬಲವಾಗಿದ್ದಲ್ಲಿನೀಚ ಸ್ಥಿತಿಯಲ್ಲಿ ಇದ್ದಲ್ಲಿ ಅಥವಾ ಉತ್ತಮ ಅಲ್ಲದ ದಶಾಭುಕ್ತಿಗಳು ನಡೆಯುತ್ತಿದ್ದಲ್ಲಿ ಸರಿಯಾದ ಜ್ಯೋತಿಷಿಗಳಲ್ಲಿ ಜಾತಕ ತೋರಿಸಿಕೊಳ್ಳುವುದು ಉತ್ತಮಯುಗಾದಿಯಿಂದ ಕೇವಲ ಒಂದು ತಿಂಗಳ ಕಾಲ ಒಂಬತ್ತನೇ ಮನೆಯಲ್ಲಿ ಮತ್ತು  ನಂತರ ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಸಂಚರಿಸಲಿದೆಪಿತ್ರಾರ್ಜಿತ ಆಸ್ತಿ ಬರಬೇಕಿದ್ದಲ್ಲಿ ಬರುತ್ತದೆಅಥವಾ ನ್ಯಾಯಾಲಯದಲ್ಲಿ  ವ್ಯಾಜ್ಯಮೊಕದ್ದಮೆಗಳು ಇದ್ದಲ್ಲಿ ರಾಜೀಸಂಧಾನದ ಮೂಲದ ಬಗೆಹರಿಯಬಹುದುಯಾವುದಕ್ಕೆ ಅದೃಷ್ಟ ಇರಬೇಕು ಅಂದುಕೊಳ್ಳುತ್ತೀರೋ ಅವು ನಿಮ್ಮ ಪರವಾಗಿ ಆಗಲಿವೆಇನ್ನು ಅಕ್ಟೋಬರ್ ತನಕ ರಾಹು ಹತ್ತನೇ ಮನೆಯಲ್ಲಿಕೇತು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ಉದ್ಯೋಗ ಸ್ಥಳದಲ್ಲಿ  ನಿಮ್ಮ ಬೆನ್ನ ಹಿಂದೆ ನಡೆಯುವ  ಹಲವು ವಿಚಾರಗಳು ಗಮನಕ್ಕೆ ಬಾರದಿರಬಹುದುಇನ್ನು ಸಂವತ್ಸರದ ಕೊನೆ ಭಾಗದಲ್ಲಿ ಸಹೋದರಸಹೋದರಿಯರಿಂದ ಅನುಕೂಲತಂದೆಯ ಆರೋಗ್ಯದಲ್ಲಿ ಸಮಸ್ಯೆ ಆಗಬಹುದು


ಸಿಂಹ

 ಸಂವತ್ಸರ ಏಳನೇ ಮನೆಯಲ್ಲಿ ಶನಿ ಸಂಚರಿಸುವಾಗ  ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬಳಿ ಯಾವುದೇ ಹಣಕಾಸಿನ ವ್ಯವಹಾರ ಮಾಡದಿರಿಯಾವುದೇ ಕೆಲಸ ಕುತ್ತಿಗೆಗೆ ಬರುವ ತನಕ ಕಾಯಬೇಡಿಸೋಮಾರಿತನ ಬಿಡಬೇಕು ಹಾಗೂ ಕ್ರೆಡಿಟ್ ಕಾರ್ಡ್ ಹಾಗೂ ಇಎಂಐಗಳನ್ನು ಕಟ್ಟಬೇಕಾದ ಸರಿಯಾದ ದಿನಾಂಕಕ್ಕೆ ಕಟ್ಟಿಬಿಡಿ. ‌ಪಾಲುದಾರಿಕೆ ವ್ಯವಹಾರಗಳಲ್ಲಿ ಏನೋ ಸರಿಹೋಗುತ್ತಿಲ್ಲ ಎಂಬ ಭಾವನೆ ಮೂಡುತ್ತದೆಸಂಗಾತಿಯ ಜತೆ ಪಾರದರ್ಶಕವಾಗಿ ಇರುವುದು ಉತ್ತಮಏಪ್ರಿಲ್ ಇಪ್ಪತ್ತೆರಡನೇ ತಾರೀಕಿನಿಂದ ಬೃಹಸ್ಪತಿ ನಿಮ್ಮ ಕರ್ಮ ಸ್ಥಾನದಲ್ಲಿ ಅಂದರೆಹತ್ತನೇ ಮನೆಯಲ್ಲಿ ಸಂಚಾರ ಮಾಡುವಾಗ ಉದ್ಯೋಗ ಸ್ಥಳದಲ್ಲಿ ಉತ್ತಮ ಬೆಳವಣಿಗೆ ಕಾಣಬಹುದುವಿದೇಶಗಳಿಗೆ ತೆರಳಬೇಕು ಎಂದಿರುವವರಿಗೆ ಒಂದಿಷ್ಟು ಶ್ರಮ ಆಗಬಹುದುಆದರೆ ಅನುಕೂಲ ಆಗುವಂಥ ಅವಕಾಶ ಇದೆಅಲ್ಪಾವಧಿಗಾದರೂ ವಿದೇಶಗಳಿಗೆ ತೆಳುವಂಥ ಯೋಗ ಇದೆಒಂಬತ್ತನೇ ಮನೆಯಲ್ಲಿ ಸಂಚರಿಸುವ ರಾಹುವಿನಿಂದಾಗಿ ತಂದೆ ಅಥವಾ ತಂದೆ ಸಮಾನರಾದವರ ಜತೆಗೆ ವೈಮನಸ್ಯಭಿನ್ನಾಭಿಪ್ರಾಯ ಏರ್ಪಡಬಹುದುಆರೋಗ್ಯದ ಸಲುವಾಗಿ ಹೆಚ್ಚಿನ ಖರ್ಚಾಗಲಿದೆಮೂರನೇ ಮನೆಯಲ್ಲಿ ಸಂಚರಿಸುವ ಕೇತು ಸಹೋದರಸಹೋದರಿಯರ ಮೂಲಕ ಲಾಭ ತರುತ್ತದೆಸಂವತ್ಸರದ ಬಹುತೇಕ ಆರು ತಿಂಗಳ ಕಾಲ ಯಾವುದೇ ಕಾರ್ಯದ ಬಗ್ಗೆ ಹಗಲುಗನಸು ಕಾಣಬೇಡಿಚರ್ಮಕ್ಕೆ ಸಂಬಂಧ ಪಟ್ಟ ಅನಾರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು.


ಕನ್ಯಾ

 ಸಂವತ್ಸರದಲ್ಲಿ ಆರನೇ ಮನೆಯಲ್ಲಿ ಶನಿ ಸಂಚರಿಸುವುದರಿಂದ ಹಣಕಾಸಿನ ಆದಾಯ ಮೂಲಗಳು ಹಾಗೂ ಆದಾಯದ ಪ್ರಮಾಣವು ಜಾಸ್ತಿ ಆಗುತ್ತವೆಬಹಳ ವರ್ಷಗಳಿಂದ ಕಾಡುತ್ತಿದ್ದ ನಿಮ್ಮ ಆರ್ಥಿಕ ಸವಾಲುಗಳನ್ನು ನಿರ್ವಹಿಸಲು ಬಲ ದೊರೆಯುತ್ತದೆದೊಡ್ಡ ಮೊತ್ತದ ಸಾಲಗಳು ಇದ್ದಲ್ಲಿ ತೀರಿಸಿಕೊಳ್ಳುತ್ತೀರಿಆತ್ಮವಿಶ್ವಾಸವು ಹೆಚ್ಚಾಗುತ್ತದೆಹೊಸ ಯೋಜನೆಗಳನ್ನು ಈಗ ಅನುಷ್ಠಾನಕ್ಕೆ ತರುತ್ತೀರಿಯುಗಾದಿಯಿಂದ ಒಂದು ತಿಂಗಳ ತನಕ ಏಳನೇ ಮನೆಯಲ್ಲಿ ಗುರು ಸಂಚರಿಸುವಾಗ ಪಾಲುದಾರಿಕೆ ವ್ಯವಹಾರಗಳು ಉತ್ತಮಗೊಳ್ಳುತ್ತವೆಸಾಂಸಾರಿಕವಾಗಿ ನೆಮ್ಮದಿಯನ್ನು ಕಾಣುತ್ತೀರಿದೂರ ಪ್ರದೇಶ ಹಾಗೂ ವಿದೇಶಗಳಿಂದ ಶುಭ ಸುದ್ದಿ ಕೇಳಿಬರುತ್ತದೆ. ‌ಏಪ್ರಿಲ್‌ನಿಂದ ಗುರು ಎಂಟನೇ ಮನೆಯಲ್ಲಿ ಸಂಚರಿಸುವಾಗ ತೆರಿಗೆ ಮತ್ತಿತರ ಶುಲ್ಕಗಳ ಕಡೆಗೆ ಲಕ್ಷ್ಯ ನೀಡಿ ಅವಧಿಯಲ್ಲಿ ದೇಹದ ತೂಕ ಜಾಸ್ತಿ ಆಗಬಹುದುನಾಲಗೆ ಚಪಲ ಕಡಿಮೆ ಮಾಡಿಕೊಳ್ಳಿಕಾನೂನು ವ್ಯಾಜ್ಯಗಳನ್ನು ಮೈಮೇಲೆ ಎಳೆದುಕೊಳ್ಳುವ ಸಾಧ್ಯತೆ ಇದೆಮತ್ತೊಬ್ಬರಿಗಾಗಿ ಜಾಮೀನು ನಿಲ್ಲಬೇಡಿಅಕ್ಟೋಬರ್ ಮೂವತ್ತರ ತನಕ ಎಂಟನೇ ಮನೆಯ ರಾಹು ಹಾಗೂ ಎರಡನೇ ಮನೆಯಲ್ಲಿ ಸಂಚರಿಸುವ ಕೇತು  ಒಳ್ಳೆ ಫಲಗಳನ್ನು ನೀಡುವುದಿಲ್ಲಚರ್ಮ ವ್ಯಾಧಿಗಳು ಕಾಣಿಸಬಹುದುಗುಪ್ತಾಂಗ ಕಾಯಿಲೆ ಕಾಣಿಸಿಕೊಳ್ಳಬಹುದುಸಂಸಾರದಲ್ಲಿ ಕಲಹ ಆಗದಂತೆ ಎಚ್ಚರಿಕೆ ವಹಿಸಿಅಕ್ಟೋಬರ್ ತಿಂಗಳಾದ ಮೇಲೆ ವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಮನಸ್ಸು ವಾಲದಿರಲಿ


ತುಲಾ

 ಸಂವತ್ಸರದಲ್ಲಿ ಐದನೇ ಮನೆಯಲ್ಲಿ ಶನಿ ಸಂಚಾರ ಇರುತ್ತದೆಹೀಗೆ ಐದನೇ ಮನೆಯಲ್ಲಿ ಸಂಚರಿಸುವಾಗ ನೀವೆಷ್ಟು ಧರ್ಮದ ದಾರಿಯಲ್ಲಿ ನಡೆದುಕೊಳ್ಳುತ್ತೀರೋಸತ್ಯವಾಗಿ ಇರುತ್ತೀರೋ ಅದರ ಆಧಾರದ ಮೇಲೆ ನೀವು ನೆಮ್ಮದಿಯಾಗಿ ಇರುವುದಕ್ಕೆ ಸಾಧ್ಯ ಹಿಂದೆ ನಿಮ್ಮನ್ನು ಕಾಡುತ್ತಿರುವ ಹಳೆಯ ಕಾಯಿಲೆಗಳು ಹೆಚ್ಚಾಗಬಹುದುಯಾವುದೇ ಕಾರಣಕ್ಕೂ ಮನೆ ಮದ್ದು ಅಥವಾ ನಿಮಗೆ ನೀವೇ ಔಷಧ ಮಾಡಿಕೊಳ್ಳಬೇಡಿಅಂದರೆ ಸ್ವಯಂ ವೈದ್ಯ ಮಾಡಕೂಡದುಅಂದ ಹಾಗೆ ಸುಲಭಕ್ಕೆ ಪತ್ತೆ ಹಚ್ಚಲು ಸಾಧ್ಯವಾಗದ ಆರೋಗ್ಯ ಸಮಸ್ಯೆಗಳು ಕೆಲವು ಕಾಡಬಹುದುಯಾವ ವೈದ್ಯರೂ ಹಾಗೂ ಯಾವ ಔ‍ಷಧವೂ ಕೆಲಸಕ್ಕೆ ಬರುತ್ತಿಲ್ಲ ಎನಿಸಬಹುದುಆದರೆ ಇದರಿಂದ ಧೈರ್ಯ ಕಳೆದುಕೊಳ್ಳಬೇಡಿದೇವರ ಮೇಲೆ ನಂಬಿಕೆಯನ್ನು ಬಿಡಬೇಡಿಯಾರೂ ಗಮನಿಸುತ್ತಿಲ್ಲ ಅಂತಲೋ ಅಥವಾ ಇನ್ಯಾರೋ ತಪ್ಪು ಮಾಡಿದರೂ ಸಿಕ್ಕಿಬೀಳಲಿಲ್ಲ ಎಂಬ ಹುಂಬ ಆಲೋಚನೆಯಲ್ಲಿ ತಪ್ಪು ಮಾಡಬೇಡಿಅಕ್ಟೋಬರ್ ತನಕ ಜನ್ಮ ರಾಶಿಯಲ್ಲೇ ಕೇತು ಹಾಗೂ ಸಪ್ತಮದಲ್ಲಿ ರಾಹು ಇರುತ್ತದೆ ವೇಳೆಯಲ್ಲಿ ಪಾಪ ಕರ್ಮಾಸಕ್ತಿ ಹೆಚ್ಚು ಮಾಡುತ್ತವೆಸಂಗಾತಿ ಬಗ್ಗೆ ಇಲ್ಲ ಸಲ್ಲದ ಅನುಮಾನವಿವಾಹದ ಆಚೆಗಿನ ಸಂಬಂಧಗಳ ಕಡೆಗೆ ಸೆಳೆತ ಇತ್ಯಾದಿ ದುರಾಲೋಚನೆಗಳು ಬರುತ್ತವೆಗಣಪತಿಸುಬ್ರಹ್ಮಣ್ಯ ಆರಾಧನೆ ಮಾಡಿಅಕ್ಟೋಬರ್ ನಂತರ ಭೂಮಿ ಖರೀದಿಗೆ ಪ್ರಯತ್ನಿಸಬಹುದು.  


ವೃಶ್ಚಿಕ

 ಸಂವತ್ಸರದಲ್ಲಿ ನಿಮ್ಮ ರಾಶಿಗೆ ನಾಲ್ಕರಲ್ಲಿ ಶನಿ ಸಂಚಾರ ಇರುತ್ತದೆನಿಮ್ಮಲ್ಲಿ ಹಲವರಿಗೆ ಆದಾಯ ಇಳಿಕೆ ಗಮನಕ್ಕೆ ಬರಲಿದೆಲೆಕ್ಕಾಚಾರ ಇಲ್ಲದಂತೆ ಯಾವುದೇ ದೊಡ್ಡ  ಪ್ರಾಜೆಕ್ಟ್‌ಗಳಿಗೆ ತೊಡಗಿಕೊಳ್ಳದಿರಿಸಾಲ ಮಾಡಬೇಕು ಎಂದಿದ್ದಲ್ಲಿ ಮುಂದಕ್ಕೆ ಹಾಕುವುದು ಉತ್ತಮಈಗಾಗಲೇ ಯಾವುದಾದರೂ ಯೋಜನೆಯಲ್ಲಿ ಮುಂದುವರಿದಿದ್ದೀನಿ ಅಂತಾದರೆ ಹಣಕಾಸು ಸಂಗತಿಗಳಲ್ಲಿ ಅಳತೆ ಮೀರದಿರಿವಯಸ್ಸಾದ ಅಥವಾ ಈಗಾಗಲೇ ಅನಾರೋಗ್ಯ ಇರುವ ತಾಯಿ ಇದ್ದಲ್ಲಿ ಸೂಕ್ತ ವೈದ್ಯಕೀಯ ಪರೀಕ್ಷೆ ಮಾಡಿಸಿನಿಮ್ಮಿಂದ ಪೂರೈಸಲಾಗದ ಮಾತು ನೀಡದಿರಿಯುಗಾದಿಯಿಂದ ಒಂದು ತಿಂಗಳು ಮಾತ್ರ ಐದನೇ ಮನೆಯಲ್ಲಿ ಗುರು ಸಂಚಾರ ಇರುತ್ತದೆ ವೇಳೆ ಒಳ್ಳೆ ಸಮಯಉತ್ತಮ ಫಲಗಳು ಸಿಗುತ್ತವೆಅದಾದ ಮೇಲೆ ಸಂವತ್ಸರದ ಕೊನೆ ತನಕ ಆರನೇ ಮನೆಯಲ್ಲಿ ಗುರು ಸಂಚರಿಸುವಾಗ ಉದ್ಯೋಗ  ಸ್ಥಳದಲ್ಲಿ ಮೇಲಧಿಕಾರಿಗಳ ಜತೆಗೆ ಮಾತುಕತೆ ವೇಳೆ ಭಿನ್ನಾಭಿಪ್ರಾಯ ಏರ್ಪಡದಂತೆ ಎಚ್ಚರಿಕೆಯಿಂದ ಇರಬೇಕುಸರ್ಕಾರದ ವ್ಯವಹಾರದಲ್ಲಿ ಕಾಗದಪತ್ರಗಳನ್ನು ಸರಿಯಾಗಿ ಪರೀಕ್ಷಿಸಿಹನ್ನೆರಡನೇ ಮನೆ ಕೇತು ಖರ್ಚನ್ನು ಹೆಚ್ಚು ಮಾಡಿಸಿದರೂ ದೇವತಾ ಆರಾಧನೆ ಕಡೆಗೆ ಮನಸ್ಸು ನೀಡುತ್ತದೆಆರನೇ ಮನೆ ರಾಹು ಭೂಮಿಷೇರುಮ್ಯೂಚುವಲ್ ಫಂಡ್‌ಗಳ ಮೂಲಕ ಆದಾಯ ತರುತ್ತದೆಅಕ್ಟೋಬರ್ ನಂತರ ಮಕ್ಕಳ ಓದುಆರೋಗ್ಯದ ಕಡೆಗೆ ಲಕ್ಷ್ಯ ನೀಡಬೇಕು.


ಧನುಸ್ಸು

 ಸಂವತ್ಸರದಲ್ಲಿ ಏಳೂವರೆ ವರ್ಷ ನಿಮ್ಮನ್ನು ಕಾಡಿದ ಸಾಡೇಸಾತ್ ಶನಿ ಗ್ರಹದ ಪ್ರಭಾವವು ಸಂಪೂರ್ಣವಾಗಿ ದೂರ ಆಗುತ್ತದೆಇನ್ನು ನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ಶನಿ ಸಂಚರಿಸುವಾಗ ಆರ್ಥಿಕ ಸ್ಥಿತಿಯಲ್ಲಿ ಬದಲಾವಣೆ ಆಗುತ್ತದೆಆದಾಯದ ಮೂಲ ಹೆಚ್ಚಾಗಲಿದೆಕೆಲಸ ಬದಲಾವಣೆಯೊಂದಿಗೆ ಸಂಬಳದಲ್ಲಿ ಹೆಚ್ಚಳಪ್ರಮೋಷನ್ಹೊಸ ವ್ಯಾಪಾರದ ಆಲೋಚನೆಗಳು ಬರಬಹುದು.  ಹೊಸ ವ್ಯಾಪಾರ ಶುರು ಮಾಡಬೇಕಿರುವವರಿಗೆ ಅನುಕೂಲ ದೊರೆಯಲಿದೆಗುರು ಗ್ರಹ ನಾಲ್ಕನೆ ಮನೆಯಲ್ಲಿಏಪ್ರಿಲ್‌ ತನಕ ಮೀನದಲ್ಲಿ ಸಂಚಾರ ಮಾಡುವಾಗ ಮನೆಸೈಟು ಖರೀದಿಮನೆ ಕಟ್ಟಿಸುವ ಯೋಗಕಾರುಬೈಕ್‌ಗಳ ಖರೀದಿ ಯೋಗ ಇವೆಏಪ್ರಿಲ್‌ನಲ್ಲಿ ಗುರುವು ಐದನೇ ಮನೆಯಲ್ಲಿ ಸಂಚಾರ ಮಾಡುವಾಗ ದೂರದ ಪ್ರದೇಶಗಳಿಗೆ ತೆರಳುವ ಯೋಗಅದರಿಂದ ಲಾಭ ಆಗುವ ಯೋಗಗಳಿವೆಹನ್ನೊಂದನೇ ಮನೆಯಲ್ಲಿ ಕೇತು ಸಂಚರಿಸುವಾಗ ಅದೃಷ್ಟ ಬಲದಿಂದ ವ್ಯಾಜ್ಯತಂಟೆತಕರಾರು ಇದ್ದಲ್ಲಿ ನಿವಾರಣೆ ಆಗುತ್ತವೆಐದನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ಮಕ್ಕಳ ಆರೋಗ್ಯದ ಕುರಿತು ಜಾಗ್ರತೆಯಿಂದ ಇರಬೇಕುಅಕ್ಟೋಬರ್ ತಿಂಗಳ ನಂತರದಲ್ಲಿ ನಾಲ್ಕನೇ ಮನೆಯಲ್ಲಿ ರಾಹು ಸಂಚಾರ ಹಾಗೂ ಹತ್ತನೇ ಮನೆಯಲ್ಲಿ ಕರ್ಮ ಸ್ಥಾನದಲ್ಲಿ ಕೇತು ಸಂಚರಿಸುವಾಗ ನಿಮ್ಮ ತಾಯಿಯನ್ನು ಜೋಪಾನವಾಗಿ ನೋಡಿಕೊಳ್ಳಿಅವರಿಗೆ ಮರೆವುಅನಾರೋಗ್ಯ ಇತ್ಯಾದಿ ಆಗಬಹುದು.


ಮಕರ

 ಸಂವತ್ಸರದಲ್ಲಿ ಕುಂಭದಲ್ಲಿನ ಶನಿ ಎರಡನೇ ಮನೆಯಲ್ಲಿ ಸಂಚಾರ ಇರುತ್ತದೆಧನ ಸ್ಥಾನದಲ್ಲಿ ಸಂಚಾರ ಆಗುವಾಗ ಹಣದ ಹರಿವು ಸ್ವಲ್ಪ ಸರಾಗ ಆಗುತ್ತದೆ ಮಧ್ಯೆ ಒತ್ತಡಹಿಂಸೆ ಅಥವಾ ಅವಮಾನ ಮಾಡುತ್ತಿದ್ದಾರೆ ಹೀಗೆ ಯಾವುದೇ ಕಾರಣಕ್ಕೂ ಕೆಲಸ ಬಿಡಬೇಡಿಯುಗಾದಿಯಿಂದ ಒಂದು ತಿಂಗಳ ತನಕ ಗುರು ಮೂರನೇ ಮನೆಯಲ್ಲಿ ಮತ್ತು  ನಂತರ ಸಂವತ್ಸರದ ಕೊನೆಯ ತನಕ ನಾಲ್ಕನೇ ಮನೆಯಲ್ಲಿ ಸಂಚಾರ ಮಾಡಲಿದೆಏನೇ ಸಾಲ ಇದ್ದರೂ ತೀರಿಸುವ ಧೈರ್ಯ ಒಂದು ತಿಂಗಳು ಮಾತ್ರ ಇರುತ್ತದೆಏಪ್ರಿಲ್ ಇಪ್ಪತ್ತನೇ ತಾರೀಕಿನಿಂದ ಗುರು ನಾಲ್ಕನೇ ಮನೆಯಲ್ಲಿ ಸಂಚರಿಸುವಾಗ ನಿರೀಕ್ಷೆಯೇ ಮಾಡದ ರೀತಿಯಲ್ಲಿ  ಭೂಮಿಮನೆ ಲಾಭ ಆಗುವ ಅಥವಾ ದೊಡ್ಡ ಮೊತ್ತ ಕೈ ಸೇರುವ ಸಾಧ್ಯತೆ ಇದೆಹಿರಿಯರುಅನುಭವಿಗಳ ಮಾರ್ಗದರ್ಶನ ಅಗತ್ಯ ಇರುವ ಕಡೆಗೆ ಅದನ್ನು ಪಡೆದುಕೊಳ್ಳಿ ವರ್ಷದ ಹತ್ತು ತಿಂಗಳುಅಂದರೆ ಅಕ್ಟೋಬರ್ ತನಕ ನಾಲ್ಕನೇ ಮನೆಯಲ್ಲಿ ರಾಹು ಇದ್ದುನಿಮ್ಮದೇ ಅನುಕೂಲಗಳು ದೊರೆಯದಂತಾಗುತ್ತದೆಅದೇ ರೀತಿ ನಿಮ್ಮ ರಾಶಿಯಿಂದ ಹತ್ತನೇ ಮನೆಯಲ್ಲಿ ಕೇತು ಇರುವುದರಿಂದ ಉದ್ಯೋಗವೃತ್ತಿಯಲ್ಲಿ ಸವಾಲುಗಳು ಜಾಸ್ತಿ ಆಗುತ್ತವೆಅಕ್ಟೋಬರ್ ನಂತರ  ಭೂಮಿಯಿಂದ ಲಾಭ ಇದೆತಂದೆಯವರ ಸಲುವಾಗಿ ಹೆಚ್ಚಿನ ಖರ್ಚಿದೆ.


ಕುಂಭ

 ಸಂವತ್ಸರದಲ್ಲಿ ನಿಮ್ಮ ಜನ್ಮ ರಾಶಿಯಲ್ಲಿ ಶನಿ ಗ್ರಹವು ಸಂಚರಿಸುವಾಗ ಸಾಡೇಸಾತ್ ಎರಡನೇ ಹಂತವು ಆರಂಭ ಆಗುತ್ತದೆಇದರೊಂದಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆದೀರ್ಘಾವಧಿ ಕಾಯಿಲೆಯಿಂದ ಬಳಲುವಂತಾಗುತ್ತದೆವೈದ್ಯರ ಸಲಹೆಸೂಚನೆ ಪಡೆಯದೆ ನೀವಾಗಿಯೇ ಡಯೆಟ್ಪಥ್ಯಹೊಸ ಔಷಧ ತೆಗೆದುಕೊಳ್ಳಬೇಡಿಯುಗಾದಿಯಿಂದ ಒಂದು ತಿಂಗಳು ಎರಡನೇ ಮನೆಯಲ್ಲಿ ಗುರು ಸಂಚಾರ ಮಾಡುವುದರಿಂದ ಹಣಕಾಸಿನ ಹರಿವಿಗೆ ಸಮಸ್ಯೆ ಏನೂ ಕಾಡುವುದಿಲ್ಲಸಾಂಸಾರಿಕವಾಗಿಯೂ ನೆಮ್ಮದಿ ಇರಲಿದೆ.ಮನೆಯಲ್ಲಿ ಶಾಂತಿ ನೆಲೆಸಿರುತ್ತದೆಏಪ್ರಿಲ್‌ನಿಂದ ಮೂರನೇ ಮನೆಯಲ್ಲಿ ಗುರು ಸಂಚರಿಸುವಾಗ ಆತ್ಮವಿಶ್ವಾಸ ಇರುತ್ತದೆಯಾವುದೇ ಕೆಲಸ ಮುಗಿಸುತ್ತೀರಿಸಹೋದರಸಹೋದರಿಯರ ಬೆಂಬಲ ನಿಮ್ಮ ಪಾಲಿಗೆ ಒದಗಿ ಬರಲಿದೆಇದರೊಂದಿಗೆ ಕೆಲವು ಕಠಿಣ ಕೆಲಸ ಸಹ ಸಲೀಸಾಗಿ ಮುಗಿಸುವುದಕ್ಕೆ ಸಾಧ್ಯವಾಗುತ್ತದೆನಿಮ್ಮ ರಾಶಿಯಿಂದ ಮೂರನೇ ಮನೆಯಲ್ಲಿ ರಾಹು ಸಂಚರಿಸುವುದರಿಂದ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವಂಥವರಿಗೆ‌ಷೇರು ವ್ಯವಹಾರದಲ್ಲಿ ಇರುವಂಥವರಿಗೆ ಹಣದ ಹರಿವು ಉತ್ತಮವಾಗಿ ಇರುತ್ತದೆಇನ್ನು ಅಕ್ಟೋಬರ್ ತನಕ ಒಂಬತ್ತರಲ್ಲಿ ಕೇತು ಸಂಚಾರ ಇರುವುದರಿಂದ ತಂದೆ ಆರೋಗ್ಯದ ಬಗ್ಗೆ ಕಾಳಜಿ ವಹಿಸಿಅಕ್ಟೋಬರ್ ನಂತರದಲ್ಲಿ ಎಷ್ಟೇ ಹಣ ಬಂದರೂ ಉಳಿತಾಯ ಸಾಧ್ಯ ಆಗುವುದಿಲ್ಲಚರ್ಮಕ್ಕೆ ಸಂಬಂಧಿಸಿದ ಅನಾರೋಗ್ಯ ಸಮಸ್ಯೆಕೂದಲು ಉದುರುವುದು ಇಂಥ ಸಮಸ್ಯೆ ಕಾಣಿಸಿಕೊಳ್ಳಬಹುದು.


ಮೀನ

 ಸಂವತ್ಸರದಲ್ಲಿ ಶನಿ ಸಂಚಾರ ನಿಮ್ಮ ವ್ಯಯ ಸ್ಥಾನದಲ್ಲಿಅಂದರೆ ಹನ್ನೆರಡನೇ ಮನೆಯಲ್ಲಿ ಆಗಲಿದೆಸಾಡೇಸಾತ್ ಶನಿಯ ಆರಂಭದ ಘಟ್ಟ ಇದಾಗಿರುತ್ತದೆಯುಗಾದಿಯ ಒಂದು ತಿಂಗಳ‌ ತನಕ ಜನ್ಮ ರಾಶಿಯಲ್ಲೇ ಇರುವ ಗುರುವಿನಿಂದ ದುಃಖಗಳು ಅನುಭವಿಸಬೇಕಾಗುತ್ತದೆಆರೋಗ್ಯ ಸಮಸ್ಯೆಗಳುಇತರರಿಂದ ಅವಮಾನ ಇವೆಲ್ಲ  ಇರುತ್ತದೆಏಪ್ರಿಲ್ ನಂತರ ಎರಡನೇ ಮನೆಗೆ ಗುರು ಗ್ರಹದ ಪ್ರವೇಶ ಆಗುತ್ತದೆ ಸಂದರ್ಭದಲ್ಲಿ ಕುಟುಂಬಧನ ಸ್ಥಾನದಲ್ಲಿ ಸಂಚರಿಸುವ ಗುರು ಗ್ರಹದ ಅನುಗ್ರಹದಿಂದಾಗಿ ಸಂಸಾರದಲ್ಲಿ ಸಂತೋಷನೆಮ್ಮದಿ ವಾತಾವರಣಹಣಕಾಸಿನ ಸಮಸ್ಯೆಗಳು ಇಳಿಮುಖ ಆಗುವುದು ಮೊದಲಾದ ಶುಭ ಫಲಗಳನ್ನು ಪಡೆಯಲಿದ್ದೀರಿಆಸ್ತಿವಾಹನಗಳ ಖರೀದಿಗೆ ಅನುಕೂಲಸಮಾಜದಲ್ಲಿ ಪ್ರಭಾವಿಗಳ ಜತೆಗೆ ನಿಮ್ಮ ಸ್ನೇಹ ಬೆಳೆಯುತ್ತದೆಸಂಬಂಧ ವೃದ್ದಿ ಆಗುವುದುಹೊಸದಾಗಿ ಕೆಲಸ ಬದಲಾವಣೆ ಆಗಬಹುದು.  ಆದರೆ  ಸಾಡೇ ಸಾತ್ ಶನಿಯ ಆರಂಭ ಹಂತ ಇದಾಗಿರುವುದರಿಂದ ಹೊಸ ಯೋಜನೆಗಳುದೊಡ್ಡ ಮೊತ್ತದ ಹಣ ಹಾಕಿ ಮಾಡುವ ವ್ಯಾಪಾರವ್ಯವಹಾರಗಳನ್ನು ಮಾಡಬೇಡಿ.  ಅಕ್ಟೋಬರ್ ತನಕ ರಾಹು ದ್ವಿತೀಯದಲ್ಲಿ ಇದ್ದುಹಗಲುಗನಸು ಕಾಣಬೇಡಿಎಂಟನೇ ಮನೆಯಲ್ಲಿನ ಕೇತುವಿನಿಂದಾಗಿ ಗುಪ್ತ ರೋಗಗಳುಚರ್ಮಕ್ಕೆ ಸಂಬಂಧಿಸಿದ ಸಮಸ್ಯೆ ಉಂಟುಮಾಡಬಹುದುಅಕ್ಟೋಬರ್ ನಂತರ ನಿಮ್ಮ ಆಪ್ತರು  ದೂರ ಆಗಬಹುದುಸಂಸಾರದಲ್ಲಿ ಕಲಹ ಇದೆ




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

maruvivaaha....

2023ರ ಮೊದಲ ಸೂರ್ಯಗ್ರಹಣ..

ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಕುಂಭ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು..