ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಕನ್ಯಾ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು
ಶುಭ ವಿಚಾರಗಳು ಫೆಬ್ರವರಿ ಮೊದಲನೇ ವಾರದಲ್ಲಿ ಧನುಸ್ಸು ರಾಶಿಯಲ್ಲಿ ಬುಧ ಇರುವ ವೇಳೆ ಸಾಫ್ಟ್ ವೇರ್ , ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೀಗೆ ಹೊಸ ಹೊಸ ತಂತ್ರಜ್ಞಾನಗಳನ್ನು ತಿಳಿದುಕೊಳ್ಳುವುದಕ್ಕೆ , ಮಾಹಿತಿ ಸಂಗ್ರಹಿಸುವುದಕ್ಕೆ ಅವಕಾಶ ಸಿಗಲಿದೆ . ನಿಮ್ಮ ಬುದ್ಧಿ ಬಹಳ ಚುರುಕಾಗಿ ಕೆಲಸ ಮಾಡಲಿದೆ . ಆರನೇ ಮನೆಯಲ್ಲಿ ಜನವರಿ ಹದಿನೇಳರಿಂದ ಶನಿ ಸಂಚಾರ ಆರಂಭವಾಗಿದ್ದು , ವಿವಿಧ ಆದಾಯ ಮೂಲಗಳಿಂದ ಆದಾಯ ಹರಿದು ಬರುವುದಕ್ಕೆ ಶುರುವಾಗುತ್ತದೆ . ಒಂದಕ್ಕಿಂತ ಹೆಚ್ಚಿನ ಆದಾಯ ಬರುವುದಕ್ಕೆ ದಾರಿಗಳು ಗೋಚರಿಸತೊಡಗುತ್ತವೆ . ...