ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ವೃಶ್ಚಿಕ ರಾಶಿಯವರ February 2023 ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು

ಶುಭ ವಿಚಾರಗಳು

 1 ಫೆಬ್ರವರಿಯ ಮೊದಲ ವಾರದಲ್ಲಿ ಎರಡನೇ ಮನೆಯಲ್ಲಿ ಬುಧ ಸಂಚಾರ ಆಗುವಾಗ ಶುಭ ಫಲಗಳನ್ನು ಪಡೆಯಲಿದ್ದೀರಿ. ನಿಮ್ಮ ವಾಕ್ಚಾತುರ್ಯದ ಮೂಲಕ ಒಳ್ಳೊಳ್ಳೆ ಕೆಲಸಗಳು ಆಗಲಿವೆ.

 2 ಈ ತಿಂಗಳು ಹದಿನೈದನೇ ತಾರೀಕು ಶುಕ್ರ ಐದನೇ ಮನೆಯಲ್ಲಿ ಮೀನ ರಾಶಿಯಲ್ಲಿ ಸಂಚರಿಸುವಾಗ ಹಣಕಾಸಿನ ಆದಾಯ ಹೆಚ್ಚಳವಾಗುತ್ತದೆ.

 3 ಫೆಬ್ರವರಿ ಎರಡನೇ ವಾರದೊಳಗೆ ಮೂರನೇ ಮನೆಯಲ್ಲಿ ಸಂಚರಿಸುವ ರವಿಯಿಂದಾಗಿ ಶುಭ ವಾರ್ತೆ ಕೇಳಿಬರಲಿದೆ.

 4 ಐದನೇ ಮನೆಯಲ್ಲಿ ಗುರು ಸಂಚರಿಸುವುದರಿಂದ ವಿದೇಶಗಳಿಗೆ ಟ್ರಾನ್ಸಿಷನ್ ಗಾಗಿ ತೆರಳುವ ಸಾಧ್ಯತೆ ಇದೆ. ಅಂದರೆ ಯಾವುದಾದರೂ ಪ್ರಾಜೆಕ್ಟ್ ಸಲುವಾಗಿ ಅಲ್ಪಾವಧಿಗೆ ತೆರಳಬಹುದು.

 5 ಆರನೇ ಮನೆಯಲ್ಲಿ ರಾಹು ಸಂಚಾರದ ವೇಳೆ ಆಸ್ತಿ ಮಾರಾಟದಿಂದ ಲಾಭ, ಅಥವಾ ಭೂಮಿ ಖರೀದಿ ಮಾಡುವಾಗ ಕಡಿಮೆ ಮೊತ್ತಕ್ಕೆ ಸಿಗಬಹುದು.





ಅಶುಭ ವಿಚಾರಗಳು

 1 ಜನವರಿ ಹದಿನೇಳರಿಂದ ನಾಲ್ಕನೇ ಮನೆಯಲ್ಲಿ ಶನಿ ಸಂಚಾರ ಇರುವುದರಿಂದ ಮಾತಿನ ಮೂಲಕ ಸಮಸ್ಯೆಗಳನ್ನು ತಂದುಕೊಳ್ಳುತ್ತೀರಿ, ತಾಯಿ ಅನಾರೋಗ್ಯದಿಂದ ಮಾನಸಿಕವಾಗಿ ಕುಗ್ಗುವಂತಾಗುತ್ತದೆ.

 2 ನಾಲ್ಕನೇ ಮನೆಯಲ್ಲಿ ರವಿ ಸಂಚರಿಸುವಾಗ ಸರ್ಕಾರಕ್ಕೆ ಸಂಬಂಧಿಸಿದಂತೆ ತೆರಿಗೆ, ಶುಲ್ಕ ಲೆಕ್ಕಾಚಾರ ತಪ್ಪಾಗಿದೆ ಎಂದು ನೋಟಿಸ್ ಬರುವ ಸಾಧ್ಯತೆಗಳಿವೆ,

 3 ಏಳನೇ ಮನೆಯಲ್ಲಿ ಕುಜ ಸಂಚಾರ ಮಾಡುವಾಗ ದಾಂಪತ್ಯದಲ್ಲಿ ವಿರಸಗಳು ಸೃಷ್ಟಿ ಆಗಬಹುದು.

 4 ಫೆಬ್ರವರಿ ಏಳನೇ ತಾರೀಕಿನ ನಂತರ ಬುಧ ಮಕರ ರಾಶಿಯಲ್ಲಿ ಮೂರನೇ ಮನೆಯಲ್ಲಿ ಸಂಚರಿಸುವಾಗ ಆತ್ಮವಿಶ್ವಾಸ ಕುಗ್ಗಲಿದೆ.

 5 ಹನ್ನೆರಡನೇ ಮನೆಯಲ್ಲಿ ಕೇತು ಸಂಚರಿಸುವಾಗ ಯಾರದೋ ಮಾತು ಕೇಳಿಕೊಂಡು ಕೋರ್ಟ್- ಪೊಲೀಸ್ ಠಾಣೆ ಮೆಟ್ಟಿಲೇರುವ ಸಾಧ್ಯತೆ ಇದ್ದು, ಹಣಕಾಸು ನಷ್ಟವನ್ನು ಅನುಭವಿಸಲಿದ್ದೀರಿ.




ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

maruvivaaha....

2023ರ ಮೊದಲ ಸೂರ್ಯಗ್ರಹಣ..

ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಕುಂಭ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು..