ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಕನ್ಯಾ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು
ಶುಭ ವಿಚಾರಗಳು
- ಫೆಬ್ರವರಿ ಮೊದಲನೇ ವಾರದಲ್ಲಿ ಧನುಸ್ಸು ರಾಶಿಯಲ್ಲಿ ಬುಧ ಇರುವ ವೇಳೆ ಸಾಫ್ಟ್ ವೇರ್, ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ಹೀಗೆ ಹೊಸ ಹೊಸ ತಂತ್ರಜ್ಞಾನಗಳನ್ನು ತಿಳಿದುಕೊಳ್ಳುವುದಕ್ಕೆ, ಮಾಹಿತಿ ಸಂಗ್ರಹಿಸುವುದಕ್ಕೆ ಅವಕಾಶ ಸಿಗಲಿದೆ. ನಿಮ್ಮ ಬುದ್ಧಿ ಬಹಳ ಚುರುಕಾಗಿ ಕೆಲಸ ಮಾಡಲಿದೆ.
- ಆರನೇ ಮನೆಯಲ್ಲಿ ಜನವರಿ ಹದಿನೇಳರಿಂದ ಶನಿ ಸಂಚಾರ ಆರಂಭವಾಗಿದ್ದು, ವಿವಿಧ ಆದಾಯ ಮೂಲಗಳಿಂದ ಆದಾಯ ಹರಿದು ಬರುವುದಕ್ಕೆ ಶುರುವಾಗುತ್ತದೆ. ಒಂದಕ್ಕಿಂತ ಹೆಚ್ಚಿನ ಆದಾಯ ಬರುವುದಕ್ಕೆ ದಾರಿಗಳು ಗೋಚರಿಸತೊಡಗುತ್ತವೆ.
- ಕುಂಭ ರಾಶಿಯಲ್ಲಿ ರವಿ ಸಂಚಾರ ಮಾಡುವಾಗ ನಿಮ್ಮ ಶತ್ರುಗಳೇ ನಿಮಗೆ ಪ್ರಚಾರ ನೀಡಲಿದ್ದಾರೆ. ಬೇರೆಯವರು ಎಸೆಯುವ ಕಲ್ಲಲ್ಲಿ ಮನೆ ಕಟ್ಟಿಕೊಳ್ಳುವವರು ಅಂತಾರಲ್ಲ, ಹಾಗೆ ಅದನ್ನೇ ನಿಮ್ಮ ಆದಾಯಕ್ಕೆ ಬಳಸಿಕೊಳ್ಳಲಿದ್ದೀರಿ.
ಅಶುಭ ವಿಚಾರಗಳು
- ಏಳನೇ ಮನೆಯಲ್ಲಿ ಶುಕ್ರ ಸಂಚಾರ ಮಾಡುವಾಗ ಕುಟುಂಬಕ್ಕೆ ಹೆಚ್ಚಿನ ಸಮಯ ನೀಡಲಿಕ್ಕೆ ಸಾಧ್ಯವಾಗುವುದಿಲ್ಲ, ಇದರಿಂದ ಅಸಮಾಧಾನಕ್ಕೆ ಕಾರಣ ಆಗುತ್ತದೆ.
- ಒಂಬತ್ತನೇ ಮನೆಯಲ್ಲಿ ಕುಜ ಸಂಚರಿಸುವಾಗ ನಿಮ್ಮ ತಂದೆಯವರು ಅಥವಾ ಪಿತೃ ಸಮಾನರಾದವರ ಜತೆಗೆ ಸಿಟ್ಟಿನಿಂದ ಮಾತುಕತೆ ಆಡುತ್ತೀರಿ. ಅಥವಾ ಅವರು ನಿಮಗೆ ಕೊಡುತ್ತೇನೆ ಎಂದಿದ್ದನ್ನು ಕೊಡದೇ ಹೋಗಬಹದು. ಅದು ಭೂಮಿ, ಹಣ ಯಾವುದಾದರೂ ಆಗಿರಬಹುದು.
- ಆರನೇ ಮನೆಯಲ್ಲಿ ರವಿ ಸಂಚಾರ ಮಾಡುವ ವೇಳೆ ಕೆಲ ಸಮಯವಾದರೂ ನೀವಿರುವ ಸ್ಥಳದಿಂದ ಬೇರೆ ಕಡೆಗೆ ಇರಬೇಕಾದಂತೆ ಪರಿಸ್ಥಿತಿ ಸೃಷ್ಟಿ ಆಗುತ್ತದೆ.
- ಐದನೇ ಮನೆಯಲ್ಲಿ ಬುಧ ಸಂಚಾರ ಮಾಡುವ ವೇಳೆ ನಿಮ್ಮ ವಿರುದ್ಧ ಕೆಲವರು ಬೇಕೆಂತಲಾದರೂ ಅಪಪ್ರಚಾರ ಮಾಡಲಿದ್ದಾರೆ. ನೀವು ಮಾಡಿರದ ಕೆಲಸಗಳನ್ನು ನೀವೇ ಮಾಡಿದ್ದೀರಿ ಎಂದು ಹೇಳಿಕೊಂಡು ಬರುವ ಮೂಲಕ ವಿಶ್ವಾಸಾರ್ಹತೆ ಕಡಿಮೆ ಮಾಡುವುದಕ್ಕೆ ಪ್ರಯತ್ನಿಸುತ್ತಾರೆ.
- ಎಂಟನೇ ಮನೆಯಲ್ಲಿ ರಾಹು- ಎರಡನೇ ಮನೆಯಲ್ಲಿನ ಕೇತು ಸಂಚಾರದಿಂದ ರಾತ್ರಿ ಕಂಡ ಬಾವಿಗೆ ಹಗಲು ಬಿದ್ದಂತಾಗುತ್ತದೆ ಪರಿಸ್ಥಿತಿ. ನೀವು ಎಷ್ಟು ರಿಟರ್ನ್ ಬರುತ್ತದೆ ಎಂದು ಅಂದಾಜು ಮಾಡಿರುತ್ತೀರೋ ಅಷ್ಟು ಬರುವುದಿಲ್ಲ. ನೀವು ಯಾರಿಂದಾದರೂ ಹೂಡಿಕೆ ಮಾಡಿಸಿದ್ದಲ್ಲಿ ಅವರಿಂದ ಮೂದಲಿಕೆ, ಬೈಗುಳ ಕೇಳಬೇಕಾಗುತ್ತದೆ
.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ