ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ತುಲಾ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು
ತುಲಾ ಶುಭ ವಿಚಾರ ಮಕರದಲ್ಲಿ ಬುಧ ಸಂಚಾರದ ವೇಳೆ ಹೊಸ ಕೋರ್ಸ್ ಸೇರಬೇಕು ಅಂದುಕೊಂಡಿರುವವರಿಗೆ ಸೂಕ್ತ ಮಾರ್ಗದರ್ಶನ ಸಿಗಲಿದೆ . ನಾಲ್ಕನೇ ಮನೆ ಬುಧನಿಂದ ಜ್ಞಾನ ವೃದ್ಧಿ ಆಗಲಿದೆ . ಐದನೇ ಮನೆಗೆ ಫೆಬ್ರವರಿ ಹದಿನೈದನೇ ತಾರೀಕಿನವರೆಗೆ ಶುಕ್ರ ಕುಂಭ ರಾಶಿಯಲ್ಲಿ ಸಂಚಾರ ಮಾಡುವಾಗ ಈ ಹಿಂದೆ ಕೆಲಸ ಮಾಡಿದ್ದೀನಿ , ಇನ್ನೂ ಆ ಹಣ ಬಂದಿಲ್ಲ ಎಂದು ಅಲೆದಾಟ ಮಾಡುತ್ತಿರುವವರಿಗೆ ಹಣ ಕೈ ಸೇರಲಿದೆ . ನಿಮ್ಮ ರಾಶಿಗೆ ಆರನೇ ಮನೆಯಲ್ಲಿ ಸಂಚರಿಸುತ್ತಿರುವ ಗುರು ಮೀನ ರಾಶಿಯಲ್ಲೇ ಇರುವುದರಿಂದ ಶತ್ರು ಬಾಧೆಯನ್ನು ಕಡಿಮೆ ಮಾಡಲಿದ್ದಾನೆ . ಅಶುಭ ವಿಚಾರ ನಾಲ್ಕನೇ ಮನೆಯಲ್ಲಿ ರವಿ ಸಂಚರಿಸುವ ವೇಳೆ ಶತ್ರುಗಳಿಂದ ನಾನಾ ಬಗೆಯಲ್ಲಿ ಹಿಂಸೆ ಆಗುತ್ತದೆ . ನಿಮ್ಮ ವಿರುದ್ಧ ಸರ್ಕಾರಕ...