ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಕರ್ಕಾಟಕ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು

 ಶುಭ ಸಮಾಚಾರ

  • ಫೆಬ್ರವರಿಯ ಮೊದಲ ಏಳು ದಿನ ಧನುಸ್ಸು ರಾಶಿಯಲ್ಲಿ ಆರನೇ ಮನೆಯಲ್ಲಿ ಬುಧ ಸಂಚಾರ ಮಾಡುವಾಗ ನಿಮ್ಮ ಪ್ರತಿಸ್ಪರ್ಧಿಗಳುಶತ್ರುಗಳು ಮಾಡುವ ತಪ್ಪಿನಿಂದ ಹಣಕಾಸು ಆದಾಯಕ್ಕೆ ದಾರಿ ಆಗುತ್ತದೆನಿಮಗೇನೋ ಸಮಸ್ಯೆ ಮಾಡುತ್ತೇವೆ ಎಂದು ಶತ್ರುಗಳು ಮಾಡುವ ಪ್ರಯತ್ನಗಳು ನಿಮಗೆ ಆದಾಯಕ್ಕೆ ಮೂಲ ಆಗುತ್ತವೆ.
  • ಇನ್ನು ಏಳನೇ ಮನೆಯಲ್ಲಿ ರವಿ ಸಂಚಾರ ಮಾಡುವಾಗ ಈಗಿರುವ ಸ್ಥಳಗಳಿಂದ ಬೇರೆಡೆ ಸ್ಥಳಾಂತರ ಆಗುವ ಸಾಧ್ಯತೆ ಇದೆಇದನ್ನು ನಿಮ್ಮ ಅನುಕೂಲವಾಗಿ ಮಾಡಿಕೊಳ್ಳುವುದು ನಿಮ್ಮ ಕೈಯಲ್ಲೇ ಇರುತ್ತದೆ.
  • ಎಂಟನೇ ಮನೆಯಲ್ಲಿ ಕುಂಭ ರಾಶಿಯಲ್ಲಿ ಶುಕ್ರ ಸಂಚಾರ ನಡೆಯುವಾಗ ಶುಭ ವಾರ್ತೆಗಳನ್ನು ಕೇಳಲಿದ್ದೀರಿವಿವಾಹಕ್ಕೆ ಪ್ರಸ್ತಾವ ಇಟ್ಟಿದ್ದುಪ್ರತಿಕ್ರಿಯೆಗಾಗಿ ಎದುರು ನೋಡುತ್ತಿದ್ದವರು ಇದ್ದಲ್ಲಿ ಮಾತುಕತೆಯಲ್ಲಿ ಪ್ರಗತಿ ಇದೆ.
  • ಒಂಬತ್ತನೇ ಮನೆಯಲ್ಲಿ ಶುಕ್ರ ಸಂಚಾರದ ವೇಳೆ ವಿದೇಶಗಳಿಗೆ ಯಾವುದಾದರೂ ಪ್ರಾಜೆಕ್ಟ್ ಗಾಗಿ ಅಲ್ಪಕಾಲಕ್ಕೆ ತೆರಳಬೇಕಾಗಬಹುದುಪಿತ್ರಾರ್ಜಿತವಾದ ಆಸ್ತಿ ನಿರೀಕ್ಷೆಯಲ್ಲಿ ಇರುವವರಿಗೆ  ವಿಚಾರದಲ್ಲಿ ಬೆಳವಣಿಗೆ ಕಾಣಬಹುದು.
  • ಹನ್ನೊಂದನೇ ಮನೆಯಲ್ಲಿ ಕುಜ ಸಂಚರಿಸುವುದರಿಂದ ಸೈಟು ಖರೀದಿ ಮಾಡಬೇಕು ಎಂದಿರುವವರಿಗೆ ಸೂಕ್ತ ಸ್ಥಳ ಸಿಗುವ ಸಾಧ್ಯತೆ ಇದೆಇಲ್ಲದಿದ್ದಲ್ಲಿ ಭೂಮಿ ಮೂಲಕವಾಗಿ ಲಾಭವನ್ನಂತೂ ಕಾಣುವ ಯೋಗ ಇದೆ.


ಅಶುಭ ವಿಚಾರ


  • ಮಕರ ರಾಶಿಯಲ್ಲಿ ಬುಧ ಸಂಚಾರದ ವೇಳೆ ಪಾರ್ಟನರ್ ಷಿಪ್ ವ್ಯವಹಾರಗಳನ್ನು ಮಾಡುತ್ತಿರುವವರ ಮಧ್ಯೆ ಮನಸ್ತಾಪವಿರಸಗಳು ಉದ್ಭವಿಸಿಇಷ್ಟು ಸಮಯ ಆಪ್ತರಾಗಿದ್ದವರೇ ದೂರ ಆಗುವ ಸಾಧ್ಯತೆ ಇದೆ.
  • ಕುಂಭ ರಾಶಿಯಲ್ಲಿ ರವಿ ಸಂಚಾರ ಮಾಡುವಾಗ ದೈಹಿಕ ಆಯಾಸ ಜಾಸ್ತಿ ಆಗುತ್ತದೆಇಷ್ಟು ಸಮಯ ತುಂಬ ಚಟುವಟಿಕೆಯಿಂದ ಇದ್ದೆಈಗ ಸ್ವಲ್ಪ ಹೊತ್ತು ಕೆಲಸ ಮಾಡಿದರೂ ಸುಸ್ತಾಗುತ್ತಿದೆ ಎಂದೆನಿಸುತ್ತದೆಆತ್ಮವಿಶ್ವಾಸ ಕಡಿಮೆ ಆಗುತ್ತದೆ.
  • ಜನವರಿ ಹದಿನೇಳನೇ ತಾರೀಕಿನಿಂದ ಎಂಟನೇ ಮನೆಗೆ ಬಂದಿರುವ ಶನಿಯಿಂದಾಗಿ ಇಷ್ಟು ಸಮಯ ನಿಮಗೆ ಗೌರವ ನೀಡುತ್ತಿದ್ದವರಿಂದಲೇ ಅವಮಾನಗಳುತಿರಸ್ಕಾರ ಆಗುವಂತೆ ಮಾಡಿಸುತ್ತದೆ.
  • ನಾಲ್ಕನೇ ಮನೆಯಲ್ಲಿ ಕೇತು ಸಂಚರಿಸುವಾಗ ತಾಯಿಯೊಂದಿಗೆ ಮನಸ್ತಾಪವಾಹನಗಳು ಪದೇ ಪದೇ ರಿಪೇರಿಗಾಗಿ ಇತ್ಯಾದಿ ಫಲಗಳನ್ನು ಕಾಣಲಿದ್ದೀರಿ.
  • ಹತ್ತನೇ ಮನೆಯಲ್ಲಿ ರಾಹು ಇರುವುದರಿಂದ ಮೇಲಧಿಕಾರಗಳು ಜತೆಗೆ ಅಭಿಪ್ರಾಯ ಭೇದಗಳು ಉಂಟು ಮಾಡುತ್ತದೆಅವರು ನಿಮ್ಮ ಬೆನ್ನಿಗೆ ಸಮಸ್ಯೆಗಳನ್ನು ಮಾಡಬಹುದುಆಪ್ತರು ನಿಮ್ಮಿಂದ ದೂರ ಆಗುವಂತೆ ಸನ್ನಿವೇಶ ಸೃಷ್ಟಿ ಆಗುತ್ತದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

maruvivaaha....

2023ರ ಮೊದಲ ಸೂರ್ಯಗ್ರಹಣ..

ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಕುಂಭ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು..