ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಧನು ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು
ಧನುಸ್ಸು
ಶುಭ ವಿಚಾರ
- ನಿಮ್ಮ ರಾಶಿಯಿಂದ ಮೂರನೇ ಮನೆ ಕುಂಭದಲ್ಲಿ ರವಿ ಸಂಚಾರ ಮಾಡುವಾಗ ತಂದೆ ಕಡೆಯಿಂದ ಅನುಕೂಲ ಆಗುವ ಸಾಧ್ಯತೆ ಇದೆ.
- ಎರಡನೇ ಮನೆ ಮಕರದಲ್ಲಿ ಬುಧ ಸಂಚಾರ ಮಾಡುವುದರಿಂದ ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವಂಥ ಯೋಗ ಇದೆ
- ಜನವರಿ ಹದಿನೇಳನೇ ತಾರೀಕಿನಿಂದ ಮೂರನೇ ಮನೆಗೆ ಬಂದಿರುವ ಶನಿಯಿಂದಾಗಿ ಹೊಸ ಹೂಡಿಕೆ, ವ್ಯವಹಾರ, ವ್ಯಾಪಾರ ಶುರು ಮಾಡಬೇಕು, ವ್ಯಾಪಾರ ವಿಸ್ತರಣೆ ಮಾಡಬೇಕು ಎಂದಿರುವವರಿಗೆ ಹಣಕಾಸು ಹರಿವು ಚೆನ್ನಾಗಿ ಆಗಲಿದೆ
- ಆರನೇ ಮನೆಯಲ್ಲಿ ವೃಷಭ ರಾಶಿಯಲ್ಲಿ ಕುಜ ಸಂಚಾರ ಇರುವಾಗ ಶತ್ರುಗಳ ವಿರುದ್ಧ ನಿಮ್ಮ ಕೈ ಮೇಲಾಗುತ್ತದೆ. ಕೋರ್ಟ್- ಕಚೇರಿ, ಪೊಲೀಸ್ ಠಾಣೆ ಮೆಟ್ಟಿಲೇರಿರುವ ವ್ಯವಹಾರದಲ್ಲಿ ಮೇಲುಗೈ ಸಾಧಿಸಲಿದ್ದೀರಿ.
- ಹನ್ನೊಂದನೇ ಮನೆಯಲ್ಲಿನ ಕೇತುವಿನಿಂದಾಗಿ ದಿಢೀರನೇ ಹಣಕಾಸು ಲಾಭ ಬರುವಂಥ ಯೋಗ ಇದೆ. ಆದರೆ ಇದನ್ನು ಉಳಿಸಿಕೊಳ್ಳುವುದು ಬಹಳ ಸವಾಲಿನ ಸಂಗತಿ ಆಗಿರುತ್ತದೆ.
ಅಶುಭ ವಿಚಾರ
- ಐದನೇ ಮನೆಯಲ್ಲಿ ರಾಹು ಸಂಚಾರ ಮಾಡುತ್ತಿರುವುದರಿಂದ ಮಕ್ಕಳ ಆರೋಗ್ಯದ ಬಗ್ಗೆ ಜಾಗ್ರತೆಯನ್ನು ವಹಿಸಬೇಕು.
- ನಾಲ್ಕನೇ ಮನೆಯ ಗುರು ಸಂಚಾರದಿಂದ ನಿಮ್ಮ ಸ್ನೇಹಿತರ ಜತೆಗೆ ಭಿನ್ನಾಭಿಪ್ರಾಯಗಳು ಏರ್ಪಡಲಿವೆ. ವಿನಾಕಾರಣ ವಾದ- ವಾಗ್ವಾದ ಮುಂದವರಿಸಬೇಡಿ
- ಮಕರದಲ್ಲಿ ಫೆಬ್ರವರಿ ಮೊದಲ ಎರಡು ವಾರ ರವಿ ಸಂಚಾರ ಮಾಡುವಾಗ ತಂದೆಯ- ತಂದೆ ಸಮಾನರಾದವರ ಆರೋಗ್ಯ, ಅವರ ಆದಾಯ ತೆರಿಗೆ, ಸಾಲ ತೀರಿಸುವ ವಿಚಾರಗಳು ನಿಮಗೆ ಚಿಂತೆ ಉಂಟು ಮಾಡುತ್ತವೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ