ಆಚಾರ್ಯ ಶ್ರೀ ವಿಠ್ಠಲ್ ಭಟ್ ಅವರು ತಿಳಿಸಿರುವಂತೆ ಮಕರ ರಾಶಿ ಯವರ February ತಿಂಗಳ ಮಾಸ ಭವಿಷ್ಯ. ಎಚ್ಚರಿಕೆಗಳು ಹಾಗೂ ಶುಭ ವಿಚಾರಗಳು
ಮಕರ
ಶುಭ ವಿಚಾರ
- ಎರಡನೇ ಮನೆಯಲ್ಲಿ ಶುಕ್ರ ಸಂಚಾರ ಮಾಡುವಾಗ ಕುಟುಂಬದಲ್ಲಿ ಸಂತಸದ ವಾತಾವರಣ ಹಣಕಾಸು ಹರಿವು ಉತ್ತಮವಾಗುತ್ತದೆ
- ನಿಮ್ಮದೇ ಜನ್ಮ ರಾಶಿಗೆ ಬುಧ ಪ್ರವೇಶ ಮಾಡಿದ ನಂತರ ಪ್ರಯಾಣಗಳನ್ನು ಮಾಡಲಿದ್ದೀರಿ. ಈ ಪ್ರಯಾಣದಲ್ಲಿ ಕಲಿಕೆ ಆಗುತ್ತದೆ, ಭಿನ್ನಾಭಿಪ್ರಾಯಗಳನ್ನು ನಿವಾರಣೆ ಮಾಡಿಕೊಳ್ಳಬಹುದು.
- ಇನ್ನು ಶುಕ್ರ ಮೂರನೇ ಮನೆಯಲ್ಲಿ ಸಂಚರಿಸುವಾಗ ಅನಾರೋಗ್ಯ ಕಾರಣಕ್ಕೆ ತೆಗೆದುಕೊಳ್ಳುತ್ತಿರುವ ಔಷಧಿಗಳು ಕೆಲಸ ಮಾಡಲು ಆರಂಭ ಆಗುತ್ತದೆ
ಅಶುಭ ವಿಚಾರ
- ಎರಡನೇ ಮನೆಯಲ್ಲಿ ಶನಿ ಸಂಚಾರ ಮಾಡುವಾಗ ನಾನಾ ವಿಧದ ಚಿಂತೆಗಳು ಕಾಡುತ್ತವೆ. ಇದು ಹೊಸ ಸಮಸ್ಯೆಗಳಿಂದ ಬರಬೇಕು ಅಂತಿಲ್ಲ. ಹಳೇ ವಿಚಾರಗಳೇ ಸಮಸ್ಯೆಗಳಾಗಿ ಕಾಡುತ್ತವೆ.
- ಹನ್ನೆರಡನೇ ಮನೆ ಬುಧ ಇರುವಾಗ ನಿಮ್ಮ ಅತಿ ಬುದ್ಧಿವಂತಿಕೆಯಿಂದ ಅಥವಾ ನಾನು ಏನೋ ಯೋಚನೆ ಮಾಡಿ, ಹಣ ಉಳಿಸ್ತೀನಿ ಅಂತ ಹೊರಟು ಫೆಬ್ರವರಿ ಮೊದಲ ವಾರದಲ್ಲಿ ಅತಿ ದೊಡ್ಡ ಪ್ರಮಾಣದಲ್ಲಿ ನಷ್ಟವನ್ನು ಕಾಣುತ್ತೀರಿ.
- ಎರಡನೇ ಮನೆಯಲ್ಲಿ ರವಿ ಸಂಚರಿಸುವಾಗ ಹಣಕಾಸಿನ ತೀವ್ರ ಮುಗ್ಗಟ್ಟು, ಅದರಲ್ಲೂ ಆಸ್ಪತ್ರೆಗಳಿಗೆ ಖರ್ಚಿನ ಪ್ರಮಾಣ ತುಂಬ ಹೆಚ್ಚಾಗಿ ಸಮಸ್ಯೆಗೆ ಸಿಲುಕಿಕೊಳ್ಳುತ್ತೀರಿ.
- ಐದನೇ ಮನೆಯಲ್ಲಿ ಕುಜ ಸಂಚಾರ ಮಾಡುವಾಗ ಗಂಡುಮಕ್ಕಳಿಗೆ ತೊಂದರೆಗಳಾಗುತ್ತವೆ. ಅದರಲ್ಲೂ ರಕ್ತಕ್ಕೆ ಸಂಬಂಧಿಸಿದ ಸಮಸ್ಯೆಗಳು ಎದುರಾಗಬಹುದು.
- ನಾಲ್ಕನೇ ಮನೆಯ ರಾಹು- ಹತ್ತನೇ ಮನೆಯ ಕೇತು ಸಂಚಾರದಿಂದ ಉದ್ಯೋಗ ಸ್ಥಳದಲ್ಲಿ ವೃಥಾ ವಿರೋಧ, ನಿಮ್ಮ ಮಾತಿನ ಮೂಲಕ ಸಮಸ್ಯೆ ತಂದುಕೊಳ್ಳುತ್ತೀರಿ. ತಾಯಿಯ ಬಗ್ಗೆ ಸುಮ್ಮಸುಮ್ಮನೆ ಸಿಟ್ಟು ಮಾಡಿಕೊಂಡು, ಅವರ ಬಗ್ಗೆ ಕೆಟ್ಟ ಮಾತುಗಳನ್ನಾಡಿ ಶಾಪಕ್ಕೆ ಗುರಿ ಆಗುತ್ತೀರಿ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ